ಶ್ರೀ ಕಾಳಾವರ ವರದರಾಜ್ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ “ಕೋಟೇಶ್ವರದ ಇತಿಹಾಸ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

0
11

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಶ್ರೀ ಕಾಳಾವರ ವರದರಾಜ್ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ–ಕೋಟೇಶ್ವರದಲ್ಲಿ IQAC ನಿರ್ದೇಶನದಡಿಯಲ್ಲಿ “ಕೋಟೇಶ್ವರದ ಇತಿಹಾಸ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 09-10-2026 ರಂದು ಮಧ್ಯಾಹ್ನ 2.30 ಗಂಟೆಗೆ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ. ಅವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಉಪನ್ಯಾಸಕರಾಗಿ ಡಾ. ಕೆ.ಎಸ್.ಎನ್. ಉಡುಪ ಅವರು ಭಾಗವಹಿಸಿದ್ದರು.
ಉಪನ್ಯಾಸದಲ್ಲಿ ಕೋಟೇಶ್ವರದ ಐತಿಹಾಸಿಕ ಹಿನ್ನೆಲೆ, ಪ್ರಾಚೀನ ಪರಂಪರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ, ಸ್ಥಳೀಯ ಇತಿಹಾಸ ಹಾಗೂ ಕೋಟೇಶ್ವರದ ಪ್ರಮುಖ ಐತಿಹಾಸಿಕ ಸ್ಥಳಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಎ., IQAC ಸಂಯೋಜಕಿ ಮೋಹಿನಿ ಅತ್ತಿಮನಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ವೈಶಾಲಿ ಜಿ.ಆರ್., ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿಶೇಷ ಉಪನ್ಯಾಸವು ವಿದ್ಯಾರ್ಥಿಗಳಿಗೆ ಕೋಟೇಶ್ವರದ ಸ್ಥಳೀಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅರಿಯಲು ಉತ್ತಮ ಅವಕಾಶವನ್ನು ಒದಗಿಸಿತು. ಕಾರ್ಯಕ್ರಮವು ಜ್ಞಾನವರ್ಧಕ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.
ತೃತೀಯ ಬಿಎ ವಿದ್ಯಾರ್ಥಿನಿ ಶೋಭ ಬಿ.ಎಸ್ ಈ ಕಾರ್ಯಕ್ರಮವನ್ನು ನಿರ್ವಹಿಸಿದರು ಶ್ರೀಮತಿ ವೈಶಾಲಿ ಜಿ. ಆರ್ ಅತಿಥಿಗಳನ್ನು ಸ್ವಾಗತಿಸಿದರು, ಇತಿಹಾಸ ವಿಭಾಗದ ಉಪನ್ಯಾಸಕರಾದ ಸಂತೋಷ್ ರವರು ವಂದನಾರ್ಪಣೆ ಗೈದರು.

Click Here

LEAVE A REPLY

Please enter your comment!
Please enter your name here