– ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರು :ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (SSCHRC) ಬುಧವಾರ, 07 ಅಕ್ಟೋಬರ್ 2026 ನಡೆದ ಕಾರ್ಯಕ್ರಮ ದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು ವೈದ್ಯಕೀಯ ಉಪಕರಣಗಳನ್ನು ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್‌ಗೆ ಹಸ್ತಾಂತರಿಸಲಾಯಿತು.
ಸಂಸದರ MPLADS ಅನುದಾನದ ಮೂಲಕ ಒದಗಿಸಲಾಗಿರುವ ಈ ವೈದ್ಯಕೀಯ ಉಪಕರಣಗಳಲ್ಲಿ ಅತ್ಯಾಧುನಿಕ ಮಲ್ಟಿಪ್ಯಾರಾಮೀಟರ್ ಪೇಷಂಟ್ ಮಾನಿಟರ್‌ಗಳು ಹಾಗೂ 16 ಸಿರಿಂಜ್ ಇನ್ಫ್ಯೂಷನ್ ಪಂಪ್‌ಗಳು ಸೇರಿವೆ. ಇವು ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೀವ್ರ ಅಸ್ವಸ್ಥ ಕ್ಯಾನ್ಸರ್ ರೋಗಿಗಳ ಆರೋಗ್ಯ ಮೇಲ್ವಿಚಾರಣೆ ಹಾಗೂ ನಿಖರವಾದ ಔಷಧ ವಿತರಣೆಯನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಲಿವೆ.
ಉಪಕರಣಗಳ ಹಸ್ತಾಂತರದ ಬಳಿಕ ಸಂಸದ ತೇಜಸ್ವಿ ಸೂರ್ಯ ಅವರು ಮಾತಾಡಿ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಛಲ, ಬದ್ಧತೆ ಮತ್ತು ದೂರದೃಷ್ಟಿ ಇಂದಿನ ಯುವಜನತೆಗೆ ದೊಡ್ಡ ಮಾದರಿಯಾಗಿದೆ. ಅಪಾರ ಮಾನವೀಯತೆ, ಪ್ರೀತಿ ಹಾಗೂ ಸಾಮಾಜಿಕ ಬದ್ಧತೆಯಿಂದ ರೋಗಿಗಳಿಗೆ ಅತ್ಯುನ್ನತ ಚಿಕಿತ್ಸೆ ನೀಡುತ್ತಿರುವ ಕೆಲವು ಆಸ್ಪತ್ರೆಗಳಲ್ಲಿ ಶಂಕರ ಆಸ್ಪತ್ರೆ ಪ್ರಮುಖವಾದದ್ದು. ಕಳೆದ 15 ವರ್ಷಗಳಿಂದ ಎಷ್ಟೇ ಸವಾಲುಗಳು ಎದುರಾದರೂ, ಸಂಸ್ಥೆಯು ತೋರಿದ ಛಲ, ಬದ್ಧತೆ ಮತ್ತು ದೂರದೃಷ್ಟಿ ಇಂದಿನ ಯುವಜನತೆಗೆ ದೊಡ್ಡ ಮಾದರಿಯಾಗಿದೆ.
ಇಷ್ಟು ವರ್ಷಗಳ ಕಾಲ ನಿರಂತರವಾಗಿ ಇದನ್ನ ಮಾಡಿಕೊಂಡು ಬರಬೇಕು ಅಂತ ಅಂದ್ರೆ ಅದಕ್ಕೆ ಎಕ್ಸ್ಟ್ರಾರ್ಡಿನರಿ ಡಿಸಿಪ್ಲಿನ್ ಬೇಕಾಗುತ್ತೆ.
ಪ್ರತಿ ವರ್ಷ ಏನು ನಮ್ಮ ಕೈಯಲ್ಲಿ ಎಷ್ಟು ಸಾಧ್ಯ ಆಗುತ್ತೆ ಎಂಪಿ ಲ್ಯಾಡ್ಸ್ ನಲ್ಲಿ ಅದರಲ್ಲಿ ನಾವು ಶಂಕರ ಆಸ್ಪತ್ರೆಗೆ ಸಪೋರ್ಟ್ ಮಾಡಬೇಕು.
ಇಂತಹ ಸಂಸ್ಥೆಗಳಿಗೆ ಕೊಟ್ಟಾಗ ಅದರ ಉಪಯೋಗ ಇನ್ನು ಜಾಸ್ತಿ ಆಗುತ್ತೆ ಅನ್ನುವಂತ ಒಂದು ಸಾರ್ಥಕ್ಯ ಭಾವ ನಮ್ಮೆಲ್ಲರಿಗೂ ಕೂಡ ಬರುತ್ತೆ.
ಈ ವೇಳೆ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿ ಎಂದು ಹೊಸ ಸೌಲಭ್ಯಗಳನ್ನು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದರು.
ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಬಿ. ಎಸ್. ಶ್ರೀನಾಥ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಈ ಉಪಕರಣಗಳು ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗುತ್ತವೆ ಅದಕ್ಕೆ ನಮಗೆ ಸಹಾಯ ಮಾಡಿದ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು ಎಂದರು.
ಈ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ. ಬಿ. ಎಸ್. ಶ್ರೀನಾಥ್, ಸಂಸದ ತೇಜಸ್ವಿ ಸೂರ್ಯ ,ಶಾಸಕಾರಾದ ಉದಯ ಗರುಡಾಚಾರ್ ಆಸ್ಪತ್ರೆಯ ಇತರ ಗೌರವಾನ್ವಿತ ಟ್ರಸ್ಟಿಗಳು, ಹಿರಿಯ ವೈದ್ಯರು, ವಿದ್ಯಾರ್ಥಿ ಮಿತ್ರರು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.












