ನಾಯಕತ್ವಕ್ಕೆ ಬದಲಾವಣೆಯ ಬದ್ಧತೆ ಇರಬೇಕು – ವಾಲ್ಟರ್ ನಂದಳಿಕೆ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕರಾವಳಿಯಲ್ಲಿ ಕ್ರೈಸ್ತ ಸಮಾಜದ ಪ್ರಗತಿಗೆ ಕಥೊಲಿಕ್ ಸಭಾ ಕೊಡುಗೆ ವಿಶೇಷವಾಗಿದೆ. ಸಮಾಜ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠರಾಗಿ ಸಾಮಾಜ ಬೆಳವಣಿಗೆಗೆ ಹೊಂದಬೇಕಾದರೆ ನಾಯಕತ್ವಕ್ಕೆ ಬದಲಾವಣೆ ಹಾಗೂ ಪರಿಸ್ಥಿತಿಯ ಅರಿವು ಇರಬೇಕು. ಸದಾ ಹೊಸತನದೊಂದಿಗೆ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ದಾಯ್ಜಿವಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆಯವರು ಸೇಂಟ್ ಮೇರಿಸ್ ಸಭಾಂಗಣದಲ್ಲಿ ನಡೆದ ಕಥೊಲಿಕ್ ಸಭಾ ವಲಯ ಮಟ್ಟದ ಮುಖಂಡರ ಸಹಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು,
1990 ರಲ್ಲಿ ಆರಂಭಗೊಂಡು,ಕಳೆದ 36 ವರ್ಷಗಳಿಂದ ಸೇವೆಯನ್ನು ಸಲ್ಲಿಸಿದ 12 ಚರ್ಚ್ ಘಟಕ ಹಾಗೂ ವಲಯದ ಅಧ್ಯಕ್ಷರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಪೌಲ್ ರೇಗೂ ರವರು, ಮುಖಂಡರನಿಸಿ ಕೊಂಡವರು ಸೇವೆ , ತ್ಯಾಗ ಮತ್ತು ಏಕತೆಯ ಧ್ಯೇಯನ್ನು ಯಾವಾಗಲೂ ಮರೆಯಬಾರದು ಎಂದರು.
ಶೆವೊಟ್ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್ರಾಯ್ ಕಿರಣ್ ಕ್ರಾಸ್ಟೊ ಅವರು ಕಥೊಲಿಕ್ ಸಭೆ ನಡೆದ ಬಂದ ದಾರಿಯನ್ನು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷರಾದ ಶೈಲಾ ಅಲ್ಮೆಡ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ AICU ರಾಜ್ಯಅಧ್ಯಕ್ಷರಾಗಿ ಆಯ್ಕೆಯಾದ ಆಲ್ವಿನ್ ಕ್ವಾಡ್ರಸ್ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಸರಕಾರದಿಂದ ಆಯ್ಕೆಯಾದ ಪಿಯುಸ್ ಡಿಸೋಜರವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ರೇಮಿ ಫೆರ್ನಾಂಡಿಸ್ ಹಾಗೂ ಕೋಶಾಧಿಕಾರಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.
ವಲಯ ಸಮಿತಿಯ ಮಾಜಿ ಅಧ್ಯಕ್ಷರಾದ ರುಫಸ್ ಬರೆಟ್ಟೊ, ವಿನೋದ್ ಕ್ರಾಸ್ಟೊ ಹಾಗೂ ಕೋಟ ಘಟಕದ ಅಧ್ಯಕ್ಷರಾದ ವಿಲ್ಟನ್ ಒಲಿವೇರಾ ಸನ್ಮಾನಿತರ ಹಾಗೂ ಮುಖ್ಯ ಅತಿಥಿಗಳ ಪರಿಚಯ ಸಭೆಗೆ ನೀಡಿದರು.
ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಆಶಾ ಕರ್ವಾಲೋ ಕಾರ್ಯಕ್ರಮವನ್ನು ನಿರೂಪಿಸಿ , ವಲಯ ಸಮಿತಿಯ ಆಮ್ಚೊಂ ಸಂದೇಶ್ ಪತ್ರಿಕಾ ಪ್ರತಿನಿಧಿ ಶ್ರೀಮತಿ ಮೇಬಲ್ ಡಿಸೋಜ ವಂದಿಸಿದರು.












