ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ, ನವಾನ್ನಪ್ರಾಶನ

0
9

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ನವರಾತ್ರಿಯಯ ವಿಜಯದಶಮಿಯಂದು ತಂತ್ರಿ ರಾಮಚಂದ್ರ ಅಡಿಗ ಹಾಗೂ ಋತ್ವಿಜರ ನೇತೃತ್ವದಲ್ಲಿ ಬೆಳಗ್ಗಿನ ಜಾವ 3 ಗಂಟೆಯಿಂದ ಆರಂಭಗೊಂಡ ವಿದ್ಯಾರಂಭ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ತಮ್ಮ ಪುಟ್ಟ ಮಕ್ಕಳೊಂದಿಗೆ ಪಾಲ್ಗೊಂಡರು.
ಸರಸ್ವತಿ ಮಂಟಪದ ಮುಂಭಾಗದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಯಿತು. ಅರ್ಚಕರು ಚಿನ್ನದ ನಾಣ್ಯದಿಂದ ಮಗುವಿನ ನಾಲಗೆಯ ಮೇಲೆ ಓಂಕಾರ ಬರೆದ ಬಳಿಕ, ಹೆತ್ತವರು ಮಗುವಿನ ಬೆರಳಿನಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಎಂದು ಬರೆಸಿ, ಅನಂತರ ಮಾತೃಭಾಷೆಯ ಅಕ್ಷರಗಳನ್ನು ಬರೆಸುವ ಮೂಲಕ ಅಕ್ಷರಾಭ್ಯಾಸ ನೆರವೇರಿಸಿದರು. ಹೊರಪೌಳಿ ಹಾಗೂ ಚಂಡಿಕಾಯಾಗದ ಒಳ ಆವರಣದಲ್ಲೂ ವಿದ್ಯಾರಂಭ ನಡೆಯಿತು.
ಇದೇ ವೇಳೆ ಎಳೆಯ ಕಂದಮ್ಮಗಳಿಗೆ ನವಾನ್ನಪ್ರಾಶನದ ಮೂಲಕ ಮೊದಲ ಬಾರಿಗೆ ಅನ್ನ ತಿನ್ನಿಸಲಾಯಿತು. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬ ನಂಬಿಕೆಯಿದೆ.

ಅ. 21ರಂದು ವಿದ್ಯಾರಂಭ, ನವಾನ್ನಪ್ರಾಶನ ಹಾಗೂ ಹೊಸತಿನ ಕದಿರು ಪಡೆಯಲು ಸಹಸ್ರಾರು ಭಕ್ತರು ಆಗಮಿಸಿದ್ದರು. ಇದರೊಂದಿಗೆ ನವರಾತ್ರಿ ಉತ್ಸವವು ವಿಜಯೋತ್ಸವದೊಡನೆ ಮುಕ್ತಾಯಗೊಂಡಿತು. ದೇಗುಲದ ವ್ಯವಸ್ಥಾಪನ ಸಮಿತಿ, ಅರ್ಚಕರು, ಸಿಬಂದಿ ಹಾಗೂ ಪೊಲೀಸರು ಸೂಕ್ತ ವ್ಯವಸ್ಥೆ ಏರ್ಪಡಿಸಿ ನೂಕುನುಗ್ಗಲಾಗದಂತೆ ಕ್ರಮ ಕೈಗೊಂಡಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಕಾರ್ಯನಿರ್ವಹಣ ಅಧಿಕಾರಿ ಪ್ರಶಾಂತ ಶೆಟ್ಟಿ, ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ, ಸುರೇಂದ್ರ ಶೆಟ್ಟಿ, ಮಹಾಲಿಂಗ ನಾಯ್ಕ, ಧನಾಕ್ಷಿ ಸುಧಾ, ಅಭಿಲಾಶ್, ರಾಜೇಶ ಕಾರಂತ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here