ಕುಂದಾಪುರ :ಸಂವಿಧಾನದ ಮೌಲ್ಯ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು – ದೋಮ ಚಂದ್ರಶೇಖರ್

0
316

Click Here

Click Here

ಕುಂದಾಪುರ ‌ಮಿರರ್ ಸುದ್ದಿ…

ಕುಂದಾಪುರ: ಐ.ಎಂ.ಜೆ. ಇನ್ಸ್ಟಿಟ್ಯೂಷನ್ಸ್ ಮೂಡ್ಲಕಟ್ಟೆ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಗಣಪತಿ ಖಾರ್ವಿ ನಿವೃತ್ತ ಯೋಧರು, ಭಾರತೀಯ ಗಡಿ ಭದ್ರತಾ ಪಡೆ ಇವರಿಂದ ಧ್ವಜ ಅನಾವರಣ ನೆರವೇರಿತು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಸತೀಶ್ ಖಾರ್ವಿಯವರನ್ನು ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೊ| ದೋಮ ಚಂದ್ರಶೇಖರ್ ರವರು ಸಂಸ್ಥೆಯ ಪರವಾಗಿ ಸನ್ಮಾನಿಸಿದರು.

ಸನ್ಮಾನಿತ ಸತೀಶ್ ಖಾರ್ವಿಯವರು ಕಠಿಣ ಶ್ರಮದ ಫಲವಾಗಿ ನಮಗೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದನ್ನು ತಮ್ಮ ಪವರ್ ಲಿಫ್ಟಿಂಗ್ ನಲ್ಲಿ ಆದ ಅನುಭವದ ಮೂಲಕ ತಿಳಿಸುತ್ತಾ, ರಾಷ್ಟ್ರಧ್ವಜ ರಾಷ್ಟ್ರಗೀತೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ದೇಶದ ಗಡಿ ಭದ್ರತಾ ಪಡೆಯ ನಿವೃತ್ತ ಯೋಧರಾದ ಗಣಪತಿ ಖಾರ್ವಿಯವರು ಗಣರಾಜ್ಯವನ್ನು ಅನೇಕ ಸ್ವಾತಂತ್ರ್ಯ ಹೋರಾಟಗಾರ, ಸೈನಿಕರ ಬಲಿದಾನದಿಂದ ನಾವು ಪಡೆದಿರುತ್ತೇವೆ. ದೇಶದ ಬಗ್ಗೆ ಒಲವನ್ನು ಮೂಡಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯ. ನಾವೆಲ್ಲರೂ ದೇಶಕ್ಕೋಸ್ಕರ ಸೈನ್ಯಕ್ಕೆ ಸೇರಬೇಕೆಂಬ ಆಶಯವನ್ನು ತಿಳಿಸಿದರು.

Click Here

ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಪ್ರೊ| ದೋಮ ಚಂದ್ರಶೇಖರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸುತ್ತಾ, ನಮ್ಮದು ಪ್ರಜಾಸತ್ತಾತ್ಮಕ ದೇಶವಾದ್ದರಿಂದ ಪ್ರಜೆಗಳಿಂದಲೇ ಆಳ್ಪಡುವ ದೇಶವಾಗಿರುವುದು ಮತ್ತು ನಮ್ಮ ದೇಶದ ಹಿರಿಮೆಯನ್ನು ತಿಳಿಸುತ್ತಾ ಪ್ರತಿಯೊಬ್ಬರು ಸಂವಿಧಾನದ ಅಧ್ಯಯನವನ್ನು ಮಾಡಬೇಕು. ಅದರ ಮೌಲ್ಯ, ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಹಾಗೂ ದೇಶದ ಗಡಿ ಭದ್ರತಾ ಪಡೆಯ ಯೋಧರಾದ ಗಣಪತಿ ಖಾರ್ವಿಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ‘ದೇಶಭಕ್ತಿ ಪಥದತ್ತ ನಮ್ಮ ಓಟ’ ಈ ಕಾರ್ಯಕ್ರಮವನ್ನು ಐ.ಎಂ.ಜೆ. ವಿದ್ಯಾ ಸಂಸ್ಥೆಯು, ಎ.ಐ.ಸಿ.ಟಿ.ಇ. ಸೂಚನೆಯ ಮೇರೆಗೆ ವೆಟರನ್ಸ್ ಇಂಡಿಯಾದವರ ಆಶಯದಂತೆ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿಯವರು ಚಾಲನೆ ನೀಡಿದರು. ಈ ದೇಶಭಕ್ತಿ ಓಟವು ನಮ್ಮ ಮೂಡ್ಲಕಟ್ಟೆ ಕಾಲೇಜಿನ ಆವರಣದಿಂದ ಪ್ರಾರಂಭಗೊಂಡು ಐ.ಎಂ.ಜಯರಾಮ್ ಶೆಟ್ಟಿ ಸರ್ಕಲ್ ಸುತ್ತುವರಿದು ಕಾಲೇಜಿನ ಆವರಣಕ್ಕೆ ಮರು ಆಗಮಿಸಿತು.

ಕಾರ್ಯಕ್ರಮದಲ್ಲಿ ಎಂ.ಐ.ಟಿ. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ| ಅಬ್ದುಲ್ ಕರೀಂ ರವರು, ಎಂ.ಸಿ.ಎನ್. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಮೆನೇಜಸ್ ರವರು, ಐ.ಎಂ.ಜೆ.ಐ.ಎಸ್.ಸಿ. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ ಪಟೇಲ್ ರವರು, ಎಂ.ಐ.ಟಿ. ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲರಾದ ಪ್ರೊ| ಮೆಲ್ವಿನ್ ಡಿಸೋಜರವರು ಮತ್ತು ಐ.ಎಂ.ಜೆ.ಐ.ಎಸ್.ಸಿ. ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸತೀಶ್ ಖಾರ್ವಿ ಯವರ ಸನ್ಮಾನ ಪತ್ರವನ್ನು ಎಂ.ಐ.ಟಿ. ವಿದ್ಯಾ ಸಂಸ್ಥೆಯ ಪ್ರೊ| ಸೂಕ್ಷ್ಮ ಅಡಿಗರು ವಾಚಿಸಿದರು. ಕಾರ್ಯಕ್ರಮವನ್ನು ಐ.ಎಂ.ಜೆ.ಐ.ಎಸ್.ಸಿ ವಿದ್ಯಾಸಂಸ್ಥೆಯ ಪ್ರೊ| ಸುಮನರವರು ನೆರವೇರಿಸಿದರು.

Click Here

LEAVE A REPLY

Please enter your comment!
Please enter your name here