ಬಗ್ವಾಡಿ :ಎನ್.ಟಿ.ಎಸ್.ಸಾಗರ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್, ಎನ್.ಟಿ.ಎಸ್. ಸಾಗರ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0
777

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನೂತನವಾಗಿ ಆರಂಭಗೊಂಡ ಎನ್.ಟಿ.ಎಸ್.ಸಾಗರ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್, ಎನ್.ಟಿ.ಎಸ್. ಸಾಗರ್ ಫ್ಯಾಮಿಲಿ ರೆಸ್ಟೋರೆಂಟ್ ಬಗ್ವಾಡಿಯಲ್ಲಿ ಶುಭಾರಂಭಗೊಂಡಿತು.

ವಾಣಿಜ್ಯ ತೆರಿಗೆ ಇಲಾಖೆಯ ಜಿ. ಮಂಜುನಾಥ್ ಎನ್.ಟಿ.ಎಸ್.ಸಾಗರ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್, ಎನ್.ಟಿ.ಎಸ್ ಸಾಗರ್ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟಿಸಿದರು.

Click Here

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಮಾತನಾಡಿ, ಸುಂದರ ಮತ್ತು ಸುಸಜ್ಜಿತವಾದ ಎನ್.ಟಿ.ಎಸ್. ಪ್ಯಾಲೇಸ್ ಈಗಾಗಲೇ ಪ್ರಸಿದ್ಧವಾಗಿದೆ. ಇದು ತಿಮ್ಮಪ್ಪ ಪೂಜಾರಿಯವರ ಕನಸು. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇದೀಗ ಇಲ್ಲಿ ಎನ್.ಟಿ.ಎಸ್.ಸಾಗರ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್, ಎನ್.ಟಿ.ಎಸ್. ಸಾಗರ್ ಫ್ಯಾಮಿಲಿ ರೆಸ್ಟೋರೆಂಟ್ ಆರಂಭಗೊಂಡಿದೆ. ಅಶೋಕ್ ಶೆಟ್ಟಿ ಸಂಸಾಡಿಯವರು ಇದನ್ನು ಕೂಡಾ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ. ಗ್ರಾಹಕರಿಗೆ ಉತ್ತಮ ಆಹಾರ, ಗುಣಮಟ್ಟ, ಉತ್ತಮ ಸೇವೆ ನೀಡುವ ಮೂಲಕ ಉದ್ಯಮ ಯಶಸ್ವಿಯಾಗಲಿ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ತಿಮ್ಮಪ್ಪ ಪೂಜಾರಿಯವರು ಎನ್.ಟಿ.ಎಸ್ ಸಭಾಂಗಣ ನಿರ್ಮಿಸಿ ಈಗಾಗಲೇ ಪ್ರಸಿದ್ಧಿಯಾಗುವಂತೆ ಕಾಳಜಿ ವಹಿಸಿ ಯಶಸ್ಸು ಕಂಡವರು. ಅದರ ಜೊತೆಯಲ್ಲಿ ಈಗ ಇನ್ನೊಂದು ಉದ್ಯಮ ಆರಂಭವಾಗುತ್ತಿದ್ದು ಅಶೋಕ ಶೆಟ್ಟಿಯವರು ಸಮರ್ಥವಾಗಿ ಅದನ್ನು ನಿರ್ವಹಿಸುತ್ತಾರೆ. ಶುಚಿತ್ವ, ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜೊತೆಯಲ್ಲಿ ಸಂಸ್ಥೆಗೆ ಗೌರವ ತಂದುಕೊಡುವ ಕೆಲಸವಾಗಲಿ ಎಂದರು.

ಈ ಸಂದರ್ಭದಲ್ಲಿ ಶಾಂತಿ ಸಾಗರ ಜೆ.ಪಿ.ನಗರ ಬೆಂಗಳೂರು ಸುಶೀಲಾ ಮತ್ತು ಎಮ್.ಬಾಬು ಪೂಜಾರಿ, ಕಟ್ ಬೆಲ್ತೂರು ಗ್ರಾ.ಪಂ.ಅಧ್ಯಕ್ಷ ನಾಗರಾಜ ಪುತ್ರನ್, ಸದಸ್ಯ ಶರತ್ ಶೆಟ್ಟಿ, ಎನ್.ಟಿ.ಎಸ್. ಸಾಗರ್ ಪ್ಯಾಲೆಸ್ ಬಗ್ವಾಡಿ ಸುಮತಿ ಮತ್ತು ತಿಮಪ್ಪ ಪೂಜಾರಿ, ಕುಂದಾಪುರ ಜೆ.ಕೆ.ಹೊಟೇಲ್ ಅಮೃತ ಮತ್ತು ಅಶೋಕ್ ಶೆಟ್ಟಿ ಸಂಸಾಡಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here