ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ನಾಗಬ್ರಹ್ಮ ಅಮೀನ್ ಮೂಲಸ್ಥಾನ ಟ್ರಸ್ಟ್, ತೆಂಕ ಎರ್ಮಾಳು ಉಡುಪಿ ಜಿಲ್ಲೆ ಇದರ ನೂತನ ಸಭಾವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ನಾಡೋಜ ಜಿ. ಶಂಕರ್ ನೆರವೇರಿಸಿ ಮಾತನಾಡಿ ಮೂಲಸ್ಥಾನವೂ ಕೂಡ ನಮ್ಮ ಪೂರ್ವಜರು ನಮಗಾಗಿ ಸ್ಥಾಪಿಸಿದ ಪುಣ್ಯ ಕ್ಷೇತ್ರ ಆದರ ಪಾವಿತ್ರತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳಿಗೆ ಪ್ರಯತ್ನಿ ತನ್ನಿಂದಾದ ಸಹಕಾರವನ್ನು ನೀಡುವುದಾಗಿಯೂ ಅತೀ ಶೀಘ್ರದಲ್ಲಿ ಕಾಮಗಾರಿ ಮುಗಿಸಲು ತಾವೆಲ್ಲರೂ ಜೋಡಿಸಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀನಾಗಬ್ರಹ್ಮ ಪರಿವಾರ ದೇವರಿಗೆ ಪೂಜೆ, ಸಮುದಾಯ ಭವನದ ಸ್ಥಳದ ಭೂವರಾಹ ಪೂಜೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಗುರುರಾಜ್ ಭಟ್ ನೇತ್ರತ್ವದಲ್ಲಿ ನೆರವೆರಿತು. ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ವೆಂಡನ್, ಮೂಲಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ಟಿ. ಅಮೀನ್, ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಕೆ. ಸಿ ಅಮೀನ್,ಮೂಲದ ಮನೆಯವರಾದ ಸುರೇಶ ಕುಂದರ್, ರಂಜನ್ ಅಮೀನ್ ಎರ್ಮಾಳು ಮುಂಬೈ ಸಭಾಧ್ಯಕ್ಷರ ಏಕನಾಥ ಅಮೀನ್, ಶಶಿ ಅಮೀನ್, ಪ್ರೇಮನಾಥ ಅಮೀನ್, ಶಂಕರ್ ಅಮೀನ್ ವಲಯಧ್ಯಕ್ಷರಾದ ಕಿಟ್ಟ ಅಮೀನ್, ಉಪಾಧ್ಯಕ್ಷರಾದ ಗುಂಡು ಅಮೀನ್, ಪ್ರಭಾಕರ ಅಮೀನ್, ಸಂಜೀವ ಕಾರ್ಯದರ್ಶಿಗಳಾದ ಮಧುಕರ್, ರಾಜು ಅಮೀನ್, ರತ್ನಾಕರ ಅಮೀನ್, ರಮೇಶ್ ಮುಕ್ತ, ರಾಮದಾ ಉಳ್ಳಾಲ, ಕೋಶಾಧಿಕಾರಿಗಳಾದ ಭಾಸ್ಕರ ಅಮೀನ್, ಜಯ ನೀಲಾವರ, ಶಿವಾಜಿ ಅಮೀನ್, ಮೋಹಿನಿ, ಹರಿದ ಅಮೀನ್, ಶಂಭು ಅಮೀನ್, ಪಡುಕೆರೆ ಸತೀಶ ಅಮೀನ್, ಕೌನ್ಸಿಲರಾದ ನವೀನ್ ಅಮೀನ್, ಸತೀಶ್ ದೊಡ್ಡ ಗುಡ್ಡೆ, ಗ್ರಾಮದ ಅಧ್ಯಕ್ಷರಾದ ದಾಮೋದರ ಸುವರ್ಣ, ಕಿಶೋರ್, ಕುಮಾರಣ್ಣ ಉಪಸ್ಥಿತರಿದ್ದರು.











