ಕೋಟ ಪಡುಕರೆ ಪಿಯು ಕಾಲೇಜಿಗೆ ಪೀಠೋಪಕರಣ ಹಸ್ತಾಂತರ

0
252

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಸರಕಾರಿ ಪದವಿಪೂರ್ವ ಕಾಲೇಜು ಕೋಟ ಪಡುಕರೆ ಇಲ್ಲಿಗೆ ತಾಲೂಕು ಪಂಚಾಯತ್ ಅನುದಾನದಡಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೀಠೋಪಕರಣಗಳನ್ನು ಹಸ್ತಾಂತರ ಕಾರ್ಯಕ್ರಮ ಸೋಮವಾರ ಕಾಲೇಜಿನಲ್ಲಿ ನಡೆಯಿತು.

Click Here

ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ಇಬ್ರಾಹಿಂಪುರ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ ಇವರಿಗೆ ಹಸ್ತಾಂತರಿಸಿದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ,ಉಪಾಧ್ಯಕ್ಷೆ ಜಯಂತಿ ಪೂಜಾರಿ,ಸದಸ್ಯರಾದ ಸುಧಾ ಎ ಪೂಜಾರಿ,ಶಿವರಾಮ್ ಶೆಟ್ಟಿ, ಭುಜಂಗ ಗುರಿಕಾರ,ಶೇಖರ್ ಗಿಳಿಯಾರು,ಜಯರಾಮ್ ಶೆಟ್ಟಿ, ಪಾಂಡು ಪೂಜಾರಿ,ಶಾರದ.ಆರ್ ಕಾಂಚನ್,ಗುಲಾಬಿ,ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್,ಶಿಕ್ಷಕರಾದ ರಾಮದಾಸ ನಾಯಕ್,ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಂತಿ,ಗೀತಾನಂದ ಸಮಾಜ ಕಾರ್ಯವಿಭಾಗದ ರವಿಕಿರಣ್ ಕೋಟ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here