ಕುಂದಾಪುರ ಮಿರರ್ ಸುದ್ದಿ…

ಕೋಟ: ಗ್ರಾಮದಲ್ಲಿ ಒಗ್ಗಟ್ಟು ಇದ್ದರೆ ಆ ಊರಿನಲ್ಲಿ ಸಕಲ ಇಷ್ಟಾರ್ಥ ನೆರವೆರಲು ಸಾಧ್ಯ ಎಂದು ನಾಡೋಜ ಡಾ.ಜಿ ಶಂಕರ್ ಹೇಳಿದರು.
ಕೋಟ ಗಿಳಿಯಾರು ಹರ್ತಟ್ಟಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತು ಪೌಳಿ ಲೋಕಾರ್ಪಣೆಗೊಳಿಸಿ ಮಾತನಾಡಿ ಧಾರ್ಮಿಕ ಕೈಂಕರ್ಯಕ್ಕೆ ಬಲ ಹೆಚ್ಚಿಸುವುದು ಊರಿನ ಒಗ್ಗಟ್ಟು ಈ ನಿಟ್ಟಿನಲ್ಲಿ ಕಲ್ಲಟ್ಟು ಮಹಾಲಿಂಗೇಶ್ವರ ಸಂತೃಪ್ತನಾಗಿ ಭಕ್ತರ ಬೇಡಿಕೆಗೆ ಸದಾ ಸ್ಪಂದಿಸಲಿದ್ದಾನೆ. ಊರು ಅಭಿವೃದ್ಧಿಯಾಗಬೇಕಾದರೆ ಧಾರ್ಮಿಕ ಕ್ಷೇತ್ರಗಳು ಉನ್ನತಿ ಕಾಣಬೇಕು ಈ ದಿಸೆಯಲ್ಲಿ ಸರಕಾರ ಧಾರ್ಮಿಕ ದತ್ತಿ ಇಲಾಖೆಯ ಸಹಾಯ ಪಡೆದು ಸ್ಥಳೀಯ ಉದ್ಯಮಿಗಳ ಸಹಕಾರದಿಂದ ಕ್ಷೇತ್ರಗಳು ಅಭಿವೃದ್ಧಿಗೊಳಲಿ ಆ ಮೂಲಕ ಗ್ರಾಮಗಳು ಧಾರ್ಮಿಕ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದೇವಳದ ವತಿಯಿಂದ ನಾಡೋಜ ಡಾ.ಜಿ.ಶಂಕರ್ ಅವರನ್ನು ಸನ್ಮಾನಿಸಲಾಯಿತು.
ದೇವಳದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ, ಪತ್ನಿ ಅಂಬಿಕಾ ಸುರೇಶ್, ಕಾರ್ಯದರ್ಶಿ ಹರೀಷ್ ದೇವಾಡಿಗ, ಕೋಶಾಧಿಕಾರಿ ಶ್ರೀಕಾಂತ್ ಶೆಣೈ, ಉಪಾಧ್ಯಕ್ಷರಾದ ತಿಮ್ಮ ಕಾಂಚನ್, ಗಿರೀಶ್ ದೇವಾಡಿಗ, ಜೊತೆಕಾರ್ಯದರ್ಶಿ ನಾಗರಾಜ್ ಗಾಣಿಗ, ಚೇತನ ಆರ್ ಕುಂದರ್, ಶಾಂತಾ ಆಚಾರ್ಯ, ಬಾಬು ಶೆಟ್ಟಿ, ಗುರುವ ಬಂಗೇರ, ಸಂತೋಷ್ ಪೂಜಾರಿ, ಸಿದ್ಧ ದೇವಾಡಿಗ, ರಾಜು ಪೂಜಾರಿ ಹೋಬಳಿಮನೆ, ಚಂದ್ರ ಹಾಡಿಕೆರೆ, ಆದಿತ್ಯ ಕೋಟ, ದೇವಳದ ಪ್ರದಾನ ಅರ್ಚಕ ಸುಧೀರ್ ಐತಾಳ್ ಸಾಲಿಗ್ರಾಮ, ಕಲಾವತಿ ಅಶೋಕ್, ಕೋಟ ಮೊಗವೀರ ಯುವ ಸಂಘದ ಅಧ್ಯಕ್ಷ ರಂಜೀತ್ ಕುಮಾರ್, ಸಂತೋಷ್ ದೇವಾಡಿಗ, ಜಗದೀಶ್ ದೇವಾಡಿಗ, ಕೋಟ ಗ್ರಾ.ಪಂ ಸದಸ್ಯ ಪಾಂಡು ಪೂಜಾರಿ, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಸ್ಥಳೀಯರಾದ ಮಹಾಬಲ ಪೂಜಾರಿ, ದಿನೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.








