ಕೊಲ್ಲೂರಿನಲ್ಲಿ ತಿಂಗಳ ಹಿಂದೆ ಮಹಿಳೆ ಪರ್ಸ್ ನಿಂದ ಬಂಗಾರ ಕದ್ದ ಆರೋಪಿ ಬಂಧನ – ಆಭರಣ ವಶಕ್ಕೆ

0
424

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜೂನ್ 4ರಂದು ಕೊಲ್ಲೂರು ದೇವಿಯ ದರ್ಶನಕ್ಕೆ ಬಂದಿದ್ದ ಮಹಿಳೆಯ ಪರ್ಸ್ ನಿಂದ ಕಳುವಾಗಿದ್ದ ಹದಿಮೂರೂವರೆ ಪವನ್ ಚಿನ್ನಾಬರಣ ಕಳವಿಗೆ ಸಂಬಂಧಿಸಿ ಆರೋಪಿ, ಖಾಸಗಿ ಬಸ್ಸೊಂದರಲ್ಲಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. (32) ನನ್ನು ಬಂಧಿಸಿದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಸಿಸಿ ಕೆಮೆರಾದ ಜಾಡು ಹಿಡಿದು ಆರೋಪಿಯನ್ನು ಬಂಧಿಸಿದ್ದಾರೆ.

Click Here

ಆರೋಪಿ ಎಗರಿಸಿದ್ದ ಎನ್ನಲಾದ 7½ ಪವನ್ ಚಿನ್ನದ ಚೈನ್, 3 ಪವನ್ ತೂಕದ ಎರಡು ಚಿನ್ನದ ಬಳೆ, 1½ ಪವನ್ ಚಿನ್ನದ ಚೈನ್, ½ ಪವನ್ ಚಿನ್ನದ ಬಳೆ, 1 ಪವನ್ ತೂಕದ 4 ಜೊತೆ ಚಿನ್ನದ ಕಿವಿ ಓಲೆ ಸಹಿತ ಒಟ್ಟು 13½ ಪವನ್ (108 ಗ್ರಾಂ) ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

Click Here

LEAVE A REPLY

Please enter your comment!
Please enter your name here