ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜು-ಸ್ಟಾಫ್ ವೆಲ್‍ಫೇರ್ ಅಸೋಸಿಯೇಶನ್ ನಿಂದ ಬೀಳ್ಕೊಡುಗೆ

0
201

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸ್ಟಾಫ್ ವೆಲ್‍ಫೇರ್ ಅಸೋಸಿಯೇಶನ್ ಆಯೋಜಿಸಿದ ಸಿಬ್ಬಂದಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ ಪಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಹಕರಿಸಿದ ಇಬ್ಬರು ಉಪಾನ್ಯಾಸಕರನ್ನು ಶ್ಲಾಘಿಸಿದರು.
ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಬೀಳ್ಕೋಡುಗೆ ಸ್ವೀಕರಿಸಿದ ಗಣಿತ ಶಾಸ್ತ್ರದ ಉಪನ್ಯಾಸಕಿ ನಿರುಷಾ ಆನಂದ ಶೆಟ್ಟಿ ಮತ್ತು ಭೌತಶಾಸ್ತ್ರ ಉಪನ್ಯಾಸಕಿ ಚೈತ್ರಾ ಸಂಸ್ಥೆಯಲ್ಲಿನ ತಮ್ಮ ಸೇವಾನುಭವನ್ನು ಹಂಚಿಕೊಂಡರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಹಾಗೂ ಇಂಗ್ಲಿಷ್ ವಿಭಾಗದ ದೀಪಿಕಾ ಜಿ. ಅನಿಸಿಕೆ ತಿಳಿಸಿದರು.

Click Here

ಕಾಲೇಜಿನ ಗಣಿತಶಾಸ್ತ್ರ ಉಪಾನ್ಯಾಸಕಿ ನಿರ್ಮಲಾ ಪ್ರಾರ್ಥಿಸಿ, ಸಿಬ್ಬಂದಿ ಸಂಘದ ಸಂಯೋಜಕ ಮಹೇಶ್ ನಾಯಕ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಸತೀಶ್ ಶೆಟ್ಟಿ ಹೆಸ್ಕತ್ತೂರು ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here