ಬಡಗುತಿಟ್ಟಿನ ಪ್ರಸಿದ್ಧ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲು ನಿಧನ

0
448

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಡಗುತಿಟ್ಟಿನ ಪ್ರಸಿದ್ಧ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲು (೫೭ವ) ಸೆ.೨೧ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

Click Here

ಬಡಗುತಿಟ್ಟಿನ ಹಲವಾರು ಮೇಳಗಳಲ್ಲಿ ಅವರು ತಿರುಗಾಟ ಮಾಡಿದ್ದರು. ಉತ್ತಮ ಕಂಠಸಿರಿ ಹೊಂದಿದ್ದ ಅವರು ಗಾನವೈಭವ, ತಾಳಮದ್ದಳೆಗಳಿಗೆ ಬೇಡಿಕೆಯ ಭಾಗವತರಾಗಿದ್ದರು. ಪ್ರಸಂಗ ರಚನೆಯಲ್ಲಿಯೂ ಗುರುತಿಸಿಕೊಂಡಿದ್ದ ರಾಮಚಂದ್ರ ನಾಯ್ಕರು ಪುರಾಣ ಆಧರಿತ, ಕಾಲ್ಪನಿಕ ಪ್ರಸಂಗಳನ್ನು ರಚಿಸಿ, ನಿರ್ದೇಶಿಸಿ ಯಶಸ್ವಿ ಪ್ರಯೋಗವನ್ನು ಮಾಡಿದ್ದರು. ಸಾಲಿಗ್ರಾಮ ಮೇಳದಲ್ಲಿಯೂ ತಿರುಗಾಟ ಮಾಡಿದ ಅವರು ಸಾಮಾಜಿಕ ಪ್ರಸಂಗಗಳಿಗೆ ಅದ್ಭುತವಾಗಿ ಜೀವ ತುಂಬಿದ್ದರು. ಇತ್ತೀಚೆಗೆ ಅವರು ಸಿಗಂದೂರು ಮೇಳದಲ್ಲಿ ತಿರುಗಾಟ ಮಾಡಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Click Here

LEAVE A REPLY

Please enter your comment!
Please enter your name here