ಕುಂದಾಪುರ ಜಿಲ್ಲೆಯಾಗಿಸಲು ಬೈಂದೂರು ಶಾಸಕರಿಗೆ ಮನವಿ, ಬೆಂಬಲ

0
805

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ನೇತ್ರತ್ವದಲ್ಲಿ ನೂತನ ಕುಂದಾಪುರ ಜಿಲ್ಲೆಯಾಗಿಸಲು ಕುಂದಾಪುರ ಹೋರಾಟ ಸಮಿತಿ ಇತ್ತೀಚಿಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಅಪ್ಪಣ್ಣ ಹೆಗಡೆ ಅವರು ನಿಯೋಗ ನೇತೃತ್ವ ವಹಿಸಿದರು.

ಕುಂದಾಪುರ ಜಿಲ್ಲೆಯನ್ನಾಗಿ ಮಾಡಿದರೆ ಒಂದಿಷ್ಟು ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂಬುವುದನ್ನು ಶಾಸಕರಿಗೆ ಮನವರಿಕೆ ಮಾಡಲಾಯಿತು.

ಮನವಿ ಸ್ವೀಕರಿಸಿದ ಶಾಸಕರು ನನ್ನ ಸಂಪೂರ್ಣ ಬೆಂಬಲ ಕುಂದಾಪುರ ಜಿಲ್ಲೆ ಬಗ್ಗೆ ಸದಾ ಇರುತ್ತದೆ ಎಂದು ತಿಳಿಸಿದರಲ್ಲದೆ ಮುಂದಿನ ದಿನದಲ್ಲಿ ಸಂಬಂಧಪಟ್ಟ ಅವರ ಗಮನಕ್ಕೂ ತರಲಾಗುವುದು, ಇದೊಂದು ತುಂಬಾ ದೂರದೃಷ್ಟಿಯ ಚಿಂತನೆ ಎಂದರು.

Click Here

ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಪ್ರಮುಖರಾದ, ಸಂಚಾಲಕ ಮುಂಬಾರ ದಿನಕರ ಶೆಟ್ಟಿ, ಪ್ರಧಾನಕಾರ್ಯದರ್ಶಿಗಳಾದ ಗಣಪತಿ ಶ್ರೀಯಾನ್, ಉಪಾಧ್ಯಕ್ಷರಾದ ದಸ್ತಗಿರಿ ಕಾವ್ರಾಡಿ, ಭುಜಂಗ ಶೆಟ್ಟಿ ಮುಳ್ಳು ಗುಡ್ಡಿ, ಗೋಪಾಲ್ ಶೆಟ್ಟಿ, ಕಿರಣ ಕ್ರಾಸ್ತ ಕನ್ನಡಕುದ್ರು, ಕೆಆರ್ ನಾಯಕ್ ಬೆಂಗಳೂರು, ಗೋವಿಂದರಾಯ ಸೇರಿಗಾರ್ ಗಂಗೊಳ್ಳಿ, ಅಶೋಕ್ ಕುಮಾರ್ ನಾಯ್ಕ್ ಅಂಪಾರು, ನಾರಾಯಣ್ ನಾಯಕ್ ನೇರಳಕಟ್ಟೆ, ಚಂದ್ರಶೇಖರ್ ಆಚಾರಿ ಬಸ್ರೂರು, ಪಾಜಲ್ ನೇರಳಕಟ್ಟೆ, ಓಂ ಗುರು ಬಸ್ರೂರು,ಸಿತಾರಾಮ ಶೆಟ್ಟಿ, ಮಹೆಶ ಗಾಣಿಗ ನೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು

Click Here

LEAVE A REPLY

Please enter your comment!
Please enter your name here