ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ದೇಶದೆಲ್ಲೆಡೆಬಮೋದಿ ಅಭಿಮಾನಿಗಳು ಹಮ್ಮಿಕೊಂಡಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧೀ ಜಯಂತಿ ಸಾಕ್ಷಿಯಾಯಿತು. ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಆನಗಳ್ಳಿಯ ಸುತ್ತಮುತ್ತಲಿನ ರಸ್ತೆ ಇಕ್ಕೆಲೆಗಳಲ್ಲಿ ಬೆಳೆದಿದ್ದ ಗಿಡಗಂಟಿ, ಪ್ಲಾಸ್ಟಿಕ್ ಕಸ ಕಡ್ಡಿಗಳ ವಿಲೇವಾರಿ ಮತ್ತು ಆನಗಳ್ಳಿ ಗ್ರಾಮ ಪಂಚಾಯತ್ ಎದುರಿನ ರಸ್ತೆ ಬದಿ, ರಸ್ತೆಯ ಇಕ್ಕೆಲಗಳಲ್ಲಿ ನಿಂತ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಆನಗಳ್ಳಿ ಬಿಜೆಪಿ ನೇತೃತ್ವದಲ್ಲಿ ಗೆಳೆಯರ ಬಳಗ (ರಿ) ಆನಗಳ್ಳಿ ಇವರ ಸಹಭಾಗಿತ್ವದಲ್ಲಿ ನಂದಿಕೇಶ್ವರ ಕ್ರಿಕೆಟರ್ ಹಾಗೂ ನೀರ್ ಬಾಯ್ಸ್, ರೈಲ್ವೇ ಬ್ರಿಡ್ಜ್ ಫ್ರೆಂಡ್ಸ್ ನ ಸದಸ್ಯರು ಅಭಿಯಾನದಲ್ಲಿ ಭಾಗವಹಿಸಿದ್ದರು.











