ಬಿಜೂರು : ಚಲಿಸುತ್ತಿದ್ದ ರೋರೋ ರೈಲಿನಲ್ಲಿದ್ದ ಲಾರಿಯಲ್ಲಿ ಅಗ್ನಿ ಸ್ಫೋಟ

0
302

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತಿಂಡಿ ತಿನಿಸುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿಗೆ ಬೆಂಕಿ ತಗುಲಿ ವಸ್ತುಗಳು ಸುಟ್ಟು ಹೋದ ಘಟನೆ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಅ.10ರಂದು ಮುಂಜಾನೆ ಸಂಭವಿಸಿದೆ.

Click Here

ಅ.9ರಂದು ಮುಂಬೈ ಕೋಲಾಡ್ ನಿಂದ ಮಂಗಳೂರು ಸುರತ್ಕಲ್ ಕಡೆಗೆ ಲಾರಿಗಳನ್ನು ಹೊತ್ತ ಗೂಡ್ಸ್ ರೈಲು ಮಂಗಳವಾರ ಮುಂಜಾನೆ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ಬರುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಲಾರಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಸಿಬಂದಿ ತಕ್ಷಣ ಗೂಡ್ಸ್ ರೈಲು ನಿಲ್ಲಿಸಿ, ಬೆಂಕಿ ಆರಿಸಲು ಪ್ರಯತ್ನಿಸಿದರು. ಬೈಂದೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದರು. ಲಾರಿ ಒಳಗಿದ್ದ ತಿಂಡಿ ತಿನಿಸುಗಳು ಭಾಗಶಃ ಸುಟ್ಟು ಹೋಗಿದೆ.

Click Here

LEAVE A REPLY

Please enter your comment!
Please enter your name here