ಚಿಕಾಗೋದಲ್ಲಿ ಮಂಗಳೂರಿನ ಕೊಂಕಣ್ ಕ್ರಿಶ್ಚಿಯನ್ ಅಸೋಸಿಯೇಶನ್ ನಿಂದ ಮೊಂತಿ ಫೆಸ್ಟ್

0
168

Click Here

Click Here

ಕುಂದಾಪುರ ಮಿರರ್ ಸುದ್ದಿ…

ಚಿಕಾಗೋ :ಮಂಗಳೂರಿನ ಕೊಂಕಣ್ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆಯನ್ನು ಇಲಿನಾಯ್ಸ್ನ ಹಾಫ್ಮನ್ ಎಸ್ಟೇಟ್ನಲ್ಲಿರುವ ಸೇಂಟ್ ಹಬರ್ಟ್ಸ್ ಚರ್ಚ್ ಹಾಲ್ ನಲ್ಲಿ ಆಚರಿಸಲಾಯಿತು.

Click Here

ಸಭೆಯಲ್ಲಿ ಮಂಗಳೂರು ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ (MKCA)ನ ಸದಸ್ಯರು ಮತ್ತು ಅತಿಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಮೊದಲ ಮತ್ತು ಎರಡನೇ ವಾಚನಗೋಷ್ಠಿಯನ್ನು ಅಸೋಸಿಯೇಶನ್ ಸದಸ್ಯರು ಓದಿದರು.

ಎಂಕೆಸಿಎ ಅಧ್ಯಕ್ಷ ಲಿಯೊನಾರ್ಡ್ ಲೋಬೊ ಸ್ವಾಗತಿಸಿ, ಮಂಗಳೂರು ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ಇತಿಹಾಸವನ್ನು ಸಭಿಕರಿಗೆ ಪರಿಚಯಿಸಿ ಸಂಸ್ಥೆಯು ನಡೆಸಿದ ಕಾರ್ಯಕ್ರಮಗಳ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿಯ ಕೊಡುಗೆಗಳನ್ನು ಕೊಂಡಾಡಿದರು. MKCA ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಆಸ್ಟಿನ್ ಪ್ರಭು ಮಾತನಾಡಿ, ಸಂಸ್ಥೆಯ ಹುಟ್ಟಿನ ಕಾರಣಗಳು, ಭಾರತದಲ್ಲಿ ಈ ಮೊಂತಿ ಫೆಸ್ಟ್ ಹಬ್ಬವನ್ನು ಹೇಗೆ ಆಚರಿಸಲಾಯಿತು ಎಂಬುದನ್ನು ವಿವರಿಸಿದರು. ಬಳಿಕ ಮಕ್ಕಳು ಮತ್ತು ವಯಸ್ಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಸಿದ ಸಂಸ್ಥೆಯ ಹಾಲಿ ಕಾರ್ಯದರ್ಶಿ ಸವಿಯೋ ಪಾಯಸ್ ವಂದಿಸಿ, ಸ್ಥಳಾವಕಾಶ ನೀಡಿದ ಪ್ಯಾರಿಷ್ ಧರ್ಮಗುರು ರೆ.ಫಾ. ಟಾಮ್ ಅಬ್ರಹಾಂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಭಾಗದ ವಿವಿಧ ರೀತಿಯ ಸಾಂಪ್ರದಾಯಿಕ ಆಹಾರವನ್ನು ಸದಸ್ಯರೇ ತಯಾರಿಸಿದ್ದು ವಿಶೇಷವಾಗಿತ್ತು. ಆಹಾರ ತಯಾರಿಸಿದ ಸಂಸ್ಥೆಯ ಸದಸ್ಯರಿಗೆ ಫಾ. ಟಾಮ್ ಅಬ್ರಹಾಂ ಶುಭ ಹಾರೈಸಿದರು. ಬಳಿಕರೆಲ್ಲರೂ ಜೊತೆಯಾಗಿ ಸಾಂಪ್ರ್ರದಾಯಿಕ ಭೋಜನ ಸೇವಿಸಿದರು. ಕ್ವೀನಿ ಮೆಂಡೋನ್ಕಾ ಅವರಿಂದ ಸಂಯೋಜಿಸಲ್ಪಟ್ಟ ಡಿಜಿಂಗ್ ನ ಕೊಂಕಣಿ, ಹಿಂದಿ ಮತ್ತು ಸ್ಪ್ಯಾನಿಷ್ ಹಾಡುಗಳ ಟ್ಯೂನ್ಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

Click Here

LEAVE A REPLY

Please enter your comment!
Please enter your name here