ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸ್ವಚ್ಛ ಭಾರತ್ ಅಭಿಯಾನ ಅಂಗವಾಗಿ ಮಂಗಳವಾರದಂದು ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ಲಯನ್ ರೋವನ್ ಡಿ’ ಕೋಸ್ತ್ ಮತ್ತು ಸದಸ್ಯರು ಹಮ್ಮಿಕೊಂಡ ಬೃಹತ್ ಸ್ವಚ್ಛತಾ ಆಂದೋಲನದಲ್ಲಿ ಮಧುವನದ ಇ.ಸಿ.ಆರ್ ಸಂಸ್ಥೆಗಳ ಎನ್. ಎಸ್. ಎಸ್. ನ 35 ವಿದ್ಯಾರ್ಥಿಗಳು ಕುಂದಾಪುರ ಪುರಸಭೆ ಸಹಕಾರದೊಂದಿಗೆ ಬಸ್ರೂರು ಮೂರು ಕೈ ಬಳಿಯಿಂದ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದರು..
ಇ.ಸಿ.ಆರ್. ಸಂಸ್ಥೆಗಳ ಎನ್.ಎಸ್. ಎಸ್. ಅಧಿಕಾರಿ ಶ್ರೀನಿಧಿ, ಮತ್ತು ದೀಪ ಹಾಗೂ ಪುರಸಭೆ ಸದಸ್ಯಶೇಖರ್ ಪೂಜಾರಿ ಭಾಗವಹಿಸಿ ಸಹಕರಿಸಿದರು.











