ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸೂರ್ಯ ಫೌಂಡೇಶನ್, ಬೆಂಗಳೂರು, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ಮತ್ತು ಸ್ಪಾರ್ಕ್ ಅಕಾಡೆಮಿ ಬೆಂಗಳೂರು ವತಿಯಿಂದ ನಿರೂಪಕರಿಗೆ ನೀಡಲಾಗುವ ರಾಜ್ಯ ಮಟ್ಟದ “ಅಪರ್ಣಾ ನಿರೂಪಣಾ ರತ್ನ” ಪ್ರಶಸ್ತಿಗೆ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಇವರು ಆಯ್ಕೆಯಾಗಿದ್ದಾರೆ.
ಇವರಿಗೆ ಅ.15 ರಂದು ಬೆಂಗಳೂರಿನ ಇಂಡೋ ಗ್ಲೋಬೋ ಕಾಲೇಜ್, ಹೆಸರಘಟ್ಟದಲ್ಲಿ ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಳನ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸೂರ್ಯ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.











