ತ್ರಾಸಿ: ಟೂರಿಸ್ಟ್ ಬೋಟ್ ಪಲ್ಟಿ – ರೈಡರ್ ನಾಪತ್ತೆ

0
407

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಟೂರಿಸ್ಟ್ ಬೋಟ್ ಒಂದು ಸಮುದ್ರದಲ್ಲಿ ಪಲ್ಟಿಯಾದ ಪರಿಣಾಮ ಬೋಟ್ ರೈಡರ್ ನಾಪತ್ತೆಯಾದ ಘಟನೆ ಶನಿವಾರ ಸಂಜೆ ಕುಂದಾಪುರ ತಾಲೂಕಿನ ತ್ರಾಸಿ ಬೀಚಿನಲ್ಲಿ ನಡೆದಿದೆ.

Click Here

ತ್ರಾಸಿ ಬೀಚಿನ ಅನುಗ್ರಹ ಬಾರ್ ಸಮೀಪ ಟೂರಿಸ್ಟ್ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್ ಎಂಬುವರು ಟೂರಿಸ್ಟ್ ಬೋಟಿನಲ್ಲಿ ಬೋಟಿಂಗ್ ನಡೆಸುತ್ತಿರುವಾಗ ಬೋಟ್ ಪಲ್ಟಿ ಆದ ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದ ಪರಿಣಾಮ ರೈಡರ್ ನಾಪತ್ತೆಯಾಗಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಪರಿಣಾಮ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ. ನಾಪತ್ತೆಯಾಗಿರುವ ಬೋಟ್ ರೈಡರ್ ನನ್ನು ಮೂಲತ ಮುರ್ಡೇಶ್ವರದ ಪ್ರಸ್ತುತ ತ್ರಾಸಿಯಲ್ಲಿ ನೆಲೆಸಿರುವ ರವಿದಾಸ್ ಎಂದು ಗುರುತಿಸಲಾಗಿದೆ.

ನಾಪತ್ತೆಯಾದ ರವಿದಾಸ್ ನ ಶೋಧ ಕಾರ್ಯ ನಡೆಯುತ್ತಿದ್ದು ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಪೊಲೀಸ್ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇನ್ನೆಷ್ಟೇ ದಾಖಲಾಗಬೇಕಿದೆ.

Click Here

LEAVE A REPLY

Please enter your comment!
Please enter your name here