ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮದಲ್ಲಿರುವ ಡಾ. ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಟ್ರಸ್ಟ್, ಸಾಲಿಗ್ರಾಮ, ಇದರ ವಿಶ್ವಸ್ಥ ಮಂಡಳಿಯ ಪುನರ್ ರಚನೆಯನ್ನು ಟ್ರಸ್ಟ್ ಕರ್ತರಾದ ಬಿ. ಮಾಲನಿ ಮಲ್ಯ ಇವರ ಮಾರ್ಗದರ್ಶನದಲ್ಲಿ ಇತ್ತೀಚಿಗೆ ನಡೆಸಲಾಯಿತು.
ಟ್ರಸ್ಟ್ ಅಧ್ಯಕ್ಷರಾಗಿ ಕೋಟೇಶ್ವರದ ಎಂಜಿನಿಯರ್ ಮತ್ತು ಸಾಮಾಜಿಕ ಕಾರ್ಯಕರ್ತ ಬಿ.ಎಂ. ಗುರುರಾಜ್ ರಾವ್, ನಿರ್ವಾಹಕ ವಿಶ್ವಸ್ಥರಾಗಿ ಬಿ. ಮಾಲಿನಿ ಮಲ್ಯ, ಉಪಾಧ್ಯಕ್ಷರಾಗಿ ಶಿಕ್ಷಕ ಕಾರ್ಕಡ ನಾರಾಯಣ್ ಆಚಾರ್, ಕಾರ್ಯದರ್ಶಿಯಾಗಿ ಬರಹಗಾರ ಕೋಡಿ ಚಂದ್ರಶೇಖರ ನಾವಡ, ಜತೆ ಕಾರ್ಯದರ್ಶಿಯಾಗಿ ಮಣಿಪಾಲದ ಸಾಮಾಜಿಕ ಕಾರ್ಯಕರ್ತೆ ಶಶಿಕಲಾ ಅಡ್ವೆ, ಕೋಶಾಧಿಕಾರಿಯಾಗಿ ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ಮಾಧವ ಪೈ, ವಿಶ್ವಸ್ಥರಾಗಿ ಮಣಿಪಾಲದ ಜಲಸಂಪನ್ಮೂಲ ತಜ್ಞ ಡಾ. ನಾರಾಯಣ ಶೆಣೈ ಕೆ., ಉಡುಪಿಯ ಅಂಕಣಕಾರ ಡಾ. ಎನ್ ವಿಶ್ವನಾಥ ಕಾಮತ್, ಶಿರಿಯಾರದ ಕೈಗಾರಿಕೊದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ಚೆಂಪಿಯ ಸಾಮಾಜಿಕ ಕಾರ್ಯಕರ್ತೆ ಪೂಜಾ ಭಟ್, ಉಡುಪಿಯ ಖ್ಯಾತ ಲೆಕ್ಕ ಪರಿಶೋಧಕ ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್, ಇವರೆಲ್ಲರ ಸಹಭಾಗಿತ್ವದಲ್ಲಿ ವಿಶ್ವಸ್ಥ ಮಂಡಳಿಯನ್ನು ರಚಿಸಲಾಯಿತು. ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ವಿಭಾಗದ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಮುನ್ನಡೆಸಲು ನಿರ್ಣಯಿಸಲಾಯಿತು.











