ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಕೊಡ್ಲಾಡಿ ಸ್ಥಳಾಂತರ ಶಾಖೆಯ ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ, ಫೆ.10 :ಆರ್ಥಿಕ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನವಿದ್ದಂತೆ. ಇಲ್ಲಿ ಯಾವುದೇ ಭೇದ ಭಾವ ಇರಬಾರದು. ಎಲ್ಲರಿಗೂ ಉತ್ತಮ ಸೇವೆ ಸಿಗುವಂತಾಗಬೇಕು. ಕೃಷಿಕರು ಯಾವತ್ತು ಮೋಸ ಮಾಡುವುದಿಲ್ಲ. ಕೃಷಿಕರಿಗೆ ಧೈರ್ಯದಿಂದ ಸಾಲ ನೀಡಬಹುದು. ಕೃಷಿಕರಿಗೆ ಹೆಚ್ಚು ಹೆಚ್ಚು ನೆರವಾದರೆ ವ್ಯವಸಾಯ ಸೆವಾ ಸಹಕಾರಿ ಸಂಘಗಳ ದ್ಯೇಯ ಅರ್ಥಪೂರ್ಣವಾಗುತ್ತದೆ. ಕರ್ಕುಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಜನಮನ್ನಣೆ ಪಡೆದಿದೆ ಎಂದು ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಹೇಳಿದರು.
ಅವರು ಫೆ.9ರಂದು ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ಕರ್ಕುಂಜೆ ಇದರ ಸ್ಥಳಾಂತರಗೊಂಡ ಕೊಡ್ಲಾಡಿ ಶಾಖೆ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ಒಂದೇ ವರ್ಷದಲ್ಲಿ ಸಾಲ ಮರುಪಾವತಿ ಕೆಲವೊಮ್ಮೆ ಕಷ್ಟವಾಗುತ್ತದೆ. ಅದಕ್ಕಾಗಿ ನಿಯಮಗಳನ್ನು ಸರಳಗೊಳಿಸಬೇಕಾದ ಅಗತ್ಯತೆ ಇದೆ. ಆಗ ರೈತನಿಗೂ ತೊಂದರೆ ಆಗುವುದಿಲ್ಲ. ರೈತನಿಗೂ ಸಮಸ್ಯೆ ಆಗುವುದಿಲ್ಲ. ಗ್ರಾಹಕರು ಕೂಡಾ ಅಷ್ಟೇ ಸಹಕಾರ ಸಂಘಗಳನ್ನೇ ಹೆಚ್ಚು ಆರ್ಥಿಕ ವ್ಯವಹಾರಕ್ಕೆ ಬಳಸಿಕೊಳ್ಳಬೇಕು ಎಂದರು.
ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ಬಾಂಡ್ಯ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕರ್ಕುಂಜೆ ವ್ಯವಸಾಯಿಕ ಸೇವಾ ಸಹಕಾರಿ ಸಂಘ ಆರಂಭವಾಗಿ ಒಂದೇ ವರ್ಷದಲ್ಲಿ ತೆರೆದ ಮೊದಲ ಶಾಖೆ ಇದು. ಆಗಿನ ಕಾಲದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಇದು ದಾಖಲೆ ಆಗಿತ್ತು. ಶೂನ್ಯದಿಂದ ಆರಂಭವಾಗಿ ದಾಖಲೆ ವ್ಯವಹಾರ ಮಾಡುತ್ತಾ ಬಂದಿದೆ. ಸದಸ್ಯರ ಸಹಕಾರದಿಂದಲೇ ನಿರಂತರ ಶೇ.100 ವಸೂಲಾತಿ ಆಗುತ್ತಿರುವ ಸಂಸ್ಥೆ ಇದು. 6 ತಿಂಗಳ 2.5 ಕೋ.ರೂ. ವೆಚ್ಚದಲ್ಲಿ ಪ್ರಧಾನ ಕಚೇರಿಗೆ ಸ್ವಂತ ನಿಧಿಯಿಂದ ಕಟ್ಟಡ ನಿರ್ಮಿಸಲಾಗಿದೆ. ಸದಸ್ಯರ, ಗ್ರಾಹಕರ ವಿಸ್ವಾಸದಿಂದ ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಕಟ್ಟಡದ ಮಾಲಕ ಬಾಂಡ್ಯ ಸುಬ್ಬಣ್ಣ ಶೆಟ್ಟಿ ಅವರು ಮೊಳಹಳ್ಳಿ ಶಿವರಾಯರ ಭಾವಚಿತ್ರ ಅನಾವರಣ ಮಾಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಲಾಕರ್ ಕೊಠಡಿ ಉದ್ಘಾಟಿಸಿದರು. ಎಸ್.ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ ಹೆಗ್ಡೆ ಮೊಳಹಳ್ಳಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಕಂಪ್ಯೂಟದ ವಿಭಾಗವನ್ನು ಎಸ್.ಸಿ.ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಉದ್ಘಾಟಿಸಿದರು. ಗೋದಾಮ ವಿಭಾಗವನ್ನು ಉದ್ಯಮಿ ಆರಾಧ್ಯ ಶೆಟ್ಟಿ ಕೊಡ್ಲಾಡಿ ಉದ್ಘಾಟಿಸಿದರು.
ಸಂಘದ ಉಪಾಧ್ಯಕ್ಷ ಬಿಜ್ರಿ ರಾಜೀವ ಶೆಟ್ಟಿ ನಿರ್ದೇಶಕರಾದ ಮಹಮ್ಮದ್ ಸಾಹೇಬ್ ನೇರಳಕಟ್ಟೆ, ಗೋಪಾಲ ಶೆಟ್ಟಿ ಹಂದಕುಂದ, ಕೃಷ್ಣ ಮಡಿವಾಳ ಕೊಡ್ಲಾಡಿ, ವಿವೇಕಾನಂದ ಭಂಡಾರಿ ಗುಲ್ವಾಡಿ, ಸುರೇಶ ಶೆಟ್ಟಿ ಹಂದಕುಂದ, ವಾಸು ನಾಯ್ಕ ಕೊಡ್ಲಾಡಿ, ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ, ಸಂತೋಷ್ ಪೂಜಾರಿ ಕರ್ಕುಂಜೆ, ಸುಲೋಚನಾ ದಾಸ್ ಕರ್ಕುಂಜೆ, ಜಾನಕಿ ಶೆಟ್ಟಿ ಸೌಕೂರು, ಸುಬ್ಬ ಗುಲ್ವಾಡಿ, ಎಸ್.ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಸಂದೀಪ್ ಕುಮಾರ್, ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸುಭಾಶ್ಚಂದ್ರ ಶೆಟ್ಟ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಬಾಂಡ್ಯ ಸುಧಾಕರ ಶೆಟ್ಟಿ ಸ್ವಾಗತಿಸಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.











