ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ

0
98

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ , ಭಾರತ ರತ್ನ ,ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾದ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಕಾನೂನಿನ ಮೂಲಕ ಭದ್ರತೆಯನ್ನು ನೀಡಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದರು ಎಂದರು.

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ದೇಶದ ಜನತೆಗೆ ಅಂಬೇಡ್ಕರ್ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು, ಸಂವಿಧಾನದಿಂದ ದೊರಕುವಂತೆ ಮಾಡಿದರು ಎಂದರು .

ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಅಂಬೇಡ್ಕರ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಕಿ ಸಣ್ಣಯ್ಯ, ನಾರಾಯಣ ಆಚಾರಿ, ಪ್ರಭಾವತಿ ಶೆಟ್ಟಿ, ಅಶೋಕ್ ಸುವರ್ಣ, ಜೊಯ್ಸ್ಟನ್ ಆನಗಳ್ಳಿ , ಶಶಿ ರಾಜ್ ಪೂಜಾರಿ, ನಿತಿನ್ ಡಿಸೋಜಾ, ಅಭಿಜಿತ್ ಪೂಜಾರಿ , ಅಬ್ಬಾಸ್, ಸದಾನಂದ ಖಾರ್ವಿ , ವೇಲಾ ಬ್ರಗಾಂಜ , ವಾಣಿ ಶೆಟ್ಟಿ , ರೇವತಿ ಶೆಟ್ಟಿ ,ಜೋಸೆಫ್ ಡಿಸೋಜಾ , ಸೀಮಾ ಪೂಜಾರಿ, ಕ್ಲಿಫರ್ಡ್ ಡಿಸಿಲ್ವಾ, ವಿಜಯಧರ್, ಮೊಹಮ್ಮದ್ ಹುಸೇನ್, ಭಾಸ್ಕರ್ ಶೆಟ್ಟಿ, ದಿನೇಶ ಬೆಟ್ಟ , ಎಡೋಲ್ಫ್ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು.

ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ಸ್ವಾಗತಿಸಿ , ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೋ ನಿರೂಪಿಸಿ , ತಾಲೂಕು ಗ್ಯಾರಂಟಿ ಸದಸ್ಯೆ ಆಶಾ ಕರ್ವಾಲ್ಲೊ ವಂದಿಸಿದರು.

Click Here

LEAVE A REPLY

Please enter your comment!
Please enter your name here