ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್.ಗಾಣಿಗ ರಾಜ್ಯಕ್ಕೆ 2ನೇ ರ್ಯಾಂಕ್

0
2584

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here


ಕುಂದಾಪುರ : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್.ಗಾಣಿಗ 624 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಸಂಸ್ಕೃತ, ಇಂಗ್ಲೀಷ್-99, ಕನ್ನಡ-100, ಗಣಿತ-100, ವಿಜ್ಞಾನ-100 ಮತ್ತು ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದುಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾಳೆ. ಈಕೆ ಗಂಗೊಳ್ಳಿ ಗುಡ್ಡೆಕೇರಿ ನಿವಾಸಿಗಳಾದ ಉದ್ಯಮಿ ಶಿವಾನಂದ ಗಾಣಿಗ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಎಸ್.ಗಾಣಿಗ ದಂಪತಿ ಪುತ್ರಿ.
ಎಸ್.ಎಸ್.ಎಲ್.ಪರೀಕ್ಷೆಯ ಫಲಿತಾಂಶದಿಂದ ಬಹಳ ಸಂತೋಷವಾಗಿದೆ. ಪರೀಕ್ಷೆಯಲ್ಲಿ 625 ಅಂಕವನ್ನು ನಿರೀಕ್ಷೆ ಮಾಡಿದ್ದೆ. 624 ಅಂಕ ಲಭಿಸಿದೆ. ಇಂಗ್ಲೀಷ್‍ನಲ್ಲಿ ಒಂದು ಅಂಕ ಕಡಿಮೆ ಬಂದಿದ್ದು, ಉತ್ತರ ಪತ್ರಿಕೆಯ ಜೆರಾಕ್ಸ್ ತರಿಸಿಕೊಂಡು ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತೇನೆ. ಪಿಯುಸಿಯಲ್ಲಿ ಪಿಸಿಎಂಸಿ ತೆಗೆದುಕೊಂಡು ಜೆಇಇ ಪರೀಕ್ಷೆ ಬರೆದು, ಮುಂದೆ ಯುಪಿಎಸ್‍ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇನೆ ಎಂದು ರಾಜ್ಯಕ್ಕೆ 2ನೇ ರ್ಯಾಂಕ್ ವಿಜೇತೆ ಸುಶ್ಮಿತಾ ಎಸ್.ಗಾಣಿಗ ಸಂತಸ ಹಂಚಿಕೊಂಡಿದ್ದಾಳೆ.

Click Here

LEAVE A REPLY

Please enter your comment!
Please enter your name here