ಕಿರಿಮಂಜೇಶ್ವರ :ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್: ಪೂರ್ವ ಪಾರ್ಥಮಿಕ ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಕಾರ್ಯಕ್ರಮ

0
520

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಕಾರ್ಯಕ್ರಮವು ಗಣಪತಿ ಮತ್ತು ಸರಸ್ವತಿ ಆರಾಧನೆ ಹಾಗೂ ನವಗ್ರಹ ಹೋಮದೊಂದಿಗೆ ನೆರವೇರಿತು.

ಈ ಕಾರ್ಯಕ್ರಮವು ವೇದಮೂರ್ತಿ ಗಜೇಂದ್ರ ಹೊಳ್ಳ ಅವರ ಅಮೃತ ಹಸ್ತದಿಂದ ದೀಪ ಪ್ರಜ್ವಲನದ ಮುಖೇನ ವಿಜ್ರಂಭಣೆಯಿಂದ ಆರಂಭಗೊಂಡಿತು.

ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು “ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಶಾಸ್ತ್ರೋಕ್ತವಾಗಿ ವಿದ್ಯಾರಂಭ ಕಾರ್ಯಕ್ರಮ
ವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಲಾಗಿದೆ. ಪೋಷಕರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಕಷ್ಟಗಳು ಮಕ್ಕಳು ಅನುಭವಿಸಬಾರದು ಎನ್ನುವ ಉದ್ದೇಶದಿಂದ ಶಾಲೆಯಲ್ಲಿ ಮನೆಯ ವಾತಾವರಣವನ್ನು ಕಲ್ಪಿಸಿಕೊಡಲಾಗಿದೆ ಎಂದರು.

ಜನತಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿಯಾದ ಶ್ಯಾಮಲಾ ಗಣೇಶ್ ಅವರು “ಇಂದಿನ ಮಕ್ಕಳೇ ಮುಂದಿನ ಪ್ರಜೆ”ಗಳಾಗಿರುವುದರಿಂದ ಪೂರ್ವ ಪ್ರಾಥಮಿಕ ಹಂತದಲ್ಲಿ ವಿದ್ಯೆಯ ಜೊತೆಗೆ ಮಕ್ಕಳಲ್ಲಿ ಸನ್ನಡತೆಯನ್ನು ಬೆಳೆಸುವಲ್ಲಿ ನಮ್ಮ ಸಂಸ್ಥೆ ಸಹಕಾರಿಯಾಗಿದೆ ಎಂದರು.

Click Here

Click Here

ವಿಷ್ಣುಮೂರ್ತಿ ಐತಾಳ್ ಅವರು “ವಿದ್ಯೆಗಿಂತ ದೊಡ್ಡದಾದುದು ಯಾವುದು ಇಲ್ಲ, ಮಕ್ಕಳು ಜ್ಞಾನವಂತರಾಗಲು ಈ ಸಂಸ್ಥೆಯಿಂದ ಜ್ಞಾನವನ್ನು ಪಡೆದು ಈ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತರಬೇಕು.ಈ ಉದ್ದೇಶದಿಂದ ನಮ್ಮಲ್ಲಿ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಇದ್ದಾಗ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದೆಂದರು.

ಶಾಲಾ ಮುಖ್ಯ ಶಿಕ್ಷಕಿಯಾದ ದೀಪಿಕಾ ಆಚಾರ್ಯ ಅವರು ಶಾಲಾ ನಿಯಮಗಳು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಮಹತ್ವದ ಬಗ್ಗೆ ತಿಳಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ರವೀಶ್ ಹೊಳ್ಳ್, ರವೀಶ್ ಮಯ್ಯ, ನಾಗೇಂದ್ರ ಹೆಬ್ಬಾರ್, ಅಕ್ಷಯ್ ಭಟ್ , ಬೋಧಕ /ಬೋಧಕೇತರ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಫಿಲೋಮಿನಾ ಒಲಿವೇರಾ ಸ್ವಾಗತಿಸಿ, ಜ್ಯೋತಿ ವಂದಿಸಿ, ಅನ್ನಪೂರ್ಣ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here