ಕೋಟ :ರೋಟರಿ ಸಹಾಯಕ ಗವರ್ನರಾಗಿ ಶ್ಯಾಮಸುಂದರ ನಾಯರಿ ಆಯ್ಕೆ

0
485

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರೋಟರಿ ವಲಯ 2ರ ಸಹಾಯಕ ಗವರ್ನರಾಗಿ ಶ್ಯಾಮಸುಂದರ ನಾಯರಿ ಆಯ್ಕೆಯಾಗಿದ್ದಾರೆ. ವಲಯ 2ರ ವ್ಯಾಪ್ತಿಯಲ್ಲಿ 6 ಕ್ಲಬ್‍ಗಳಿಗೆ ಸಹಾಯಕ ಗವರ್ನರ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ. 2005ನೇ ಇಸವಿಯಲ್ಲಿ ರೋಟರಿಗೆ ಪಾದಾರ್ಪಣೆ ಮಾಡಿದ್ದು, 2010-11 ರಲ್ಲಿ ರೋಟರಿ ಕೋಟ ಸಾಲಿಗ್ರಾಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು. ಆ ವರ್ಷ ರೋಟರಿ ಜಿಲ್ಲೆಯಲ್ಲಿ ಬೆಸ್ಟ್ ಕ್ಲಬ್ ಅವಾರ್ಡ್ ಪಡೆದುಕೊಂಡಡಿದ್ದಾರೆ. 2018 ರಲ್ಲಿ ಝೋನಲ್ ಲೆಪ್ಟ್‍ನಂಟ್ ಆಗಿ, ತದನಂತರ ರೋಟರಿಯಲ್ಲಿ ವಲಯ ಮತ್ತು ಜಿಲ್ಲಾ ಮಟ್ಟದ ಹುದ್ದೆಗಳನ್ನು ನಿಭಾಯಿಸಿದ್ದಾರೆ.

Click Here

ಭಾರತೀಯ ಜನತಾ ಪಾರ್ಟಿಯ ಉಡುಪಿ ಜಿಲ್ಲಾ ಕಾನೂನು ಪ್ರಕೋಷ್ಠದ ಸಹ-ಸಂಚಾಲಕರಾಗಿ, ರಾಜ್ಯ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ, ಕೋಟ ಸಹಕಾರಿ ವ್ಯವಸಾಯಕ ಸಂಘ ಮಾಜಿ ನಿರ್ದೇಶಕರಾಗಿ, ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಸದಸ್ಯರಾಗಿ, ಶ್ರೀ ಅಘೋರೇಶ್ವರ ದೇವಸ್ಥಾನದ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಹೆದ್ದಾರಿಯ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2000ನೇ ಇಸವಿಯಿಂದ ಕುಂದಾಪುರದಲ್ಲಿ ವಕೀಲ ವೃತ್ತಿ ಆರಂಭಿಸಿದ್ದು, ಭಾರತ ಸರಕಾರದ ನೋಟರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Click Here

LEAVE A REPLY

Please enter your comment!
Please enter your name here