ಬಾಳೆಬೆಟ್ಟು ಫ್ರೆಂಡ್ಸ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಸಿಹಿ ತಿಂಡಿ ವಿತರಣೆ

0
562

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಾಳೆಬೆಟ್ಟು ಫ್ರೆಂಡ್ಸ್ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಮಣೂರು ಗ್ರಾಮದ ನಿಧಿ ಪೈ( 625/625) ಹಾಗೂ ಅತ್ಯಧಿಕ ಅಂಕ ಗಳಿಸಿದ ದೀಕ್ಷಾ ಹೆಗಡೆ (625/619) ಹಾಗೂ ಸ್ಕಂದ ಪೈ( 625/611) ಇವರ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲಿಸಲಾಯಿತು.‌ ಮಣೂರು ರಾಮ ಪ್ರಸಾದ್ ಮತ್ತು ಕಂಬಳಗದ್ದೆಬೆಟ್ಟು ಅಂಗನವಾಡಿಗಳಿಗೆ ಸಿಹಿ, ತಿಂಡಿ ವಿತರಿಸಲಾಯಿತು .

ಈ ಸಂದರ್ಭದಲ್ಲಿ ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ, ಕಾರ್ಯದರ್ಶಿ ಅವಿನಾಶ್ ಶೆಟ್ಟಿ , ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ , ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ ಕದ್ರಿಕಟ್ಟು, ವನಿತಾ ಶ್ರೀಧರ ಆಚಾರ್, ಶಾಂತ, ಸ್ಥಳೀಯರಾದ ಗೋಪಾಲ್ ಮಡಿವಾಳ ಹಾಗೂ ಬಾಳೆಬೆಟ್ಟು ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here