ಕುಂದಾಪುರ ಮಿರರ್ ಸುದ್ದಿ…
ಕೋಟ: ಕರ್ಣಾಟಕ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ .ಹಣಕಾಸು ವ್ಯವಹಾರದಿಂದ ಆರಂಭಗೊಂಡು ಇಂದು ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವುದು ಕನ್ನಡಿಗರಿಗೆ ಹೆಮ್ಮೆಪಡುವ ವಿಚಾರವಾಗಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಇದರ ಧರ್ಮದರ್ಶಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.
ಕೋಟದ ಕರ್ಣಾಟಕ ಬ್ಯಾಂಕ್ ಇದರ 55ರ ಸಂಭ್ರಮಾಚರಣೆಯ ವರ್ಷತೋತ್ಸವದ ಸವಿಘಳಿಗೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬದಲಾವಣೆಯ ಪರ್ವ ಎಲ್ಲಿಂದ ಪ್ರಾರಂಭಗೊಂಡಿದೆ ಎಂದರೆ ಅದು ಕರ್ಣಾಟಕ ಬ್ಯಾಂಕ್‍ನಿಂದ ಆರಂಭಗೊಂಡಿದೆ ಎನ್ನುಲು ಅತೀವ ಸಂತೋಷವಾಗುತ್ತದೆ. ಕೊರೋನಾ ಸಂಕಷ್ಟ ದಿನಗಳನ್ನು ಲೆಕ್ಕಿಸದೆ ನೂರ ಇಪ್ಪತ್ತೈದು ಕೋಟಿಗೂ ಅಧಿಕ ಲಾಭ ಗಳಿಸಿದೆ ,ಅಷ್ಟಲ್ಲದೆ ಜನಸಾಮಾನ್ಯರಿಗೆ ಉತ್ಕೃಷ್ಟ ಸೇವೆಯ ಜೊತೆ ಅಭಿವೃದ್ಧಿಗೆ ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವ್ಯಾಪಿ ತನ್ನ ಕವಲುಗಳನ್ನು ಪಸರಿಸಿಕೊಂಡು ರಾಷ್ಟ್ರೀಯ ಬ್ಯಾಂಕ್‍ಗಳಿಗೆ ಸರಿಸಮಾನಾಗಿ ಬೆಳೆದು ನಿಂತಿದೆ.ಅದರಲ್ಲೂ ಇತ್ತೀಚಿಗಿನ ಆಡಳಿತ ಚುಕ್ಕಾಣಿ ಹಿಡಿದ ಎಂ.ಎಸ್ ಮಹಾಬಲೇಶ್ವರ ಭಟ್ ಕಾರ್ಯನಿರ್ವಹಣೆ ಜನಮೆಚ್ಚುಗೆ ಗಳಿಸಿಕೊಂಡಿದೆ.
ಇದೇ ವೇಳೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇ.ಮೂ.ಮಧುಸೂದನ್ ಬಾಯರಿ ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ 55ರ ಸಂಭ್ರಮದ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಉಡುಪಿಯ ಪ್ರಾದೇಶಿಕ ಕಛೇರಿಯ ಚೀಫ್ ಮ್ಯಾನೇಜರ್ ಗಳಾದ ಅರುಣ್ ಟಿ.ಆರ್, ಪ್ರದೀಪ್,ನಿವೃತ್ತ ಡಿ.ಜಿ.ಎಮ್ ರವೀಂದ್ರನಾಥ ಹಂದೆ,ಆನಂದರಾಮ ಅಡಿಗ ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕರ್ಣಾಟಕ ಬ್ಯಾಂಕ್ ಕೋಟ ಶಾಖೆಯ ಪ್ರಭಂಧಕ ಸಂತೋಷ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಭಾರತೀಯ ಎಕ್ಸಾ ವಿಮಾ ಕಂಪನಿಯ ಸಿಬ್ಬಂದಿ ವಿನಯ್ ಕಾಂಚನ್ ನಿರೂಪಿಸಿದರು. ಸಹಾಯಕ ಶಾಖಾ ಪ್ರಭಂಧಕ ರಜನಿ ವಂದಿಸಿದರು.ಬ್ಯಾಂಕ್ ಸಿಬ್ಬಂದಿ ನಾಗೇಶ್ ಮಯ್ಯ ಸಹಕರಿಸಿದರು.











