ಕೋಟ :ನಿಸ್ವಾರ್ಥ ವ್ಯಕ್ತಿತ್ವವೇ ಸಮಾಜಕ್ಕೆ ಮಾದರಿ – ಸಂತೋಷ್ ಕುಮಾರ್ ಕೋಟ ನುಡಿನಮನದಲ್ಲಿ ಶಾಸಕ ಕೊಡ್ಗಿ ಹೇಳಿಕೆ

0
369

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಪ್ರತಿಯೊರ್ವ ಮನುಷ್ಯನು ನಿಸ್ವಾರ್ಥತೆಯನ್ನು ಮೈಗೂಡಿಸಿಕೊಂಡಾಗ ಜಗತ್ತು ಅವನತ್ತ ತಿರುಗಿ ನೋಡುತ್ತದೆ. ಇದಕ್ಕೆ ಸಂತೋಷ್ ಕುಮಾರ್ ಜೀವನದ ತಳಹದಿಯೇ ಸಾಕ್ಷಿ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

Click Here

ಕೋಟದ ಸಮುದ್ಯತಾ ಬ್ಯಾಂಕೆಟ್ ಸಭಾಂಗಣದಲ್ಲಿ ಜೈಹಿಂದ್ ಕ್ರಿಕೆಟರ್ಸ ಪಡುಕರೆ ಇವರ ವತಿಯಿಂದ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ನಿಧನರಾದ ಶಿಕ್ಷಕ, ಸಾಹಿತಿ ಸಂತೋಷ್ ಕುಮಾರ್ ಕೋಟ ಇವರಿಗೆ ನುಡಿನಮನ ಸಲ್ಲಿಸಿ ಮಾತನಾಡಿ ಸಮಾಜದ ಒರೆಕೋರೆಗಳನ್ನು ತಿದ್ದುತ್ತಾ ಸಮಾಜಕ್ಕಾಗಿಯೇ ತನ್ನ ಜೀವಿತ ಅವಧಿಯನ್ನು ಕಳೆದ ಸಂತೋಷ್ ಜೀವನದ ತಳಹದಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂತಹ ವ್ಯಕ್ತಿಗಳು ಸಮಾಜದ ಆಸ್ತಿಯಾಗಿ ಜನಸಾಮಾನ್ಯರ ಹೃದಯ ಗೆದ್ದಿದ್ದಾರೆ ಎಂದರು.

ಇದೇ ವೇಳೆ ಸಂತೋಷ್ ಕುಮಾರ್ ಭಾವಚಿತ್ರಕ್ಕೆ ಗಣ್ಯರು ಪುಷ್ಭ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು.

ಸಭೆಯಲ್ಲಿ ಗಣ್ಯರಾದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸುಜ್ಞಾನ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ರಮೇಶ್ ಶೆಟ್ಟಿ, ಭರತ್ ಶೆಟ್ಟಿ, ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್, ಸಾಂಸ್ಕೃತಿಕ ಚಿಂತಕ ರಮೇಶ್ ಹೆಚ್ ಕುಂದರ್, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ, ಉದ್ಯಮಿಗಳಾದ ಬಿಜು ನಾಯರ್, ರಕ್ಷಿತ್ ಕುಂದರ್, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಲಕ್ಷ್ಮೀ ಸೋಮಬಂಗೇರ ಸ.ಪ್ರ.ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್ ನಾಯಕ್, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ನಿಟ್ಟೂರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ, ಶಿಕ್ಷಕ ಸಂತೋಷ್ ಕಾಂಚನ್, ದಲಿತ ಸಂಘದ ರಾಜು ಬೆಟ್ಟಿನಮನೆ, ಮಾಜಿ ಜಿ.ಪಂ ಸದಸ್ಯ ಶ್ರೀಲತಾ ಸುರೇಶ್ ಶೆಟ್ಟಿ, ಕೋಟ ಪಂಚಾಯತ್ ಸದಸ್ಯ ಅಜಿತ್ ದೇವಾಡಿಗ, ಪ್ರಜ್ಞಾ ಭಾರತಿ ಟ್ರಸ್ಟ್ ನ ಸುರೇಶ್, ನಿಟ್ಟೂರು ಉದಯ್, ನಿಟ್ಟೂರು ಗ್ರಾಮಪಂಚಾಯತ್ ಸಿಬ್ಬಂದಿ ರವಿ ಮತ್ತಿತರರು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಪ್ರತ್ರಕರ್ತ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರೆ, ಕಿತೀಶ್ ಪೂಜಾರಿ, ಪ್ರಭಾಕರ್, ಜೈಹಿಂದ್ ಕ್ರಿಕೆಟರ್ಸನ ಪ್ರಶಾಂತ್ ಪಡುಕರೆ, ಮೋಹನ್ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here