ಕೋಟ :ಪುನಿತ್ ರಾಜ್ ಕುಮಾರ್ ಅವರ ಮಾನವೀಯ ಮೌಲ್ಯಗಳು ಮಾದರಿ – ಡಾ.ಅಶೋಕ್ ಆಚಾರ್ಯ

0
353

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಮಾಜಕ್ಕಾಗಿ ತನ್ನ ಜೀವಿತ ಅವಧಿಯನ್ನು ತೆರೆಯ ಮರೆಯಲ್ಲಿ ಅರ್ಪಿಸಿಕೊಂಡ ಪುನಿತ್ ರಾಜ್ ಕುಮಾರ್ ಜೀವನಚರಿತ್ರೆ ಅದ್ಭುತವಾದದ್ದು ಎಂದು ಕುಂದಾಪುರ ಆಯುಷ್ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್ ಆಚಾರ್ಯ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ಆಶ್ರಯದಲ್ಲಿ ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಪುನಿತ್ ರಾಜ್ ಕುಮಾರ್ ರವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಕ್ಕಾಗಿ ತುಡಿಯುವ ಮನಸ್ಸು ಹೆಚ್ಚಬೇಕು ಈ ಮೂಲಕ ಪಂಚವರ್ಣ ಸಂಘಟನೆ ಈ ಕಾರ್ಯಕ್ರಮ ಅರ್ಥಪೂರ್ಣ ಎಂದರು.

ಸಮಾಜಸೇವಕ ಹೊಸಬದುಕು ಆಶ್ರಮದ ಮುಖ್ಯಸ್ಥ ಹ.ರಾ.ವಿನಯಚಂದ್ರ ಸಾಸ್ತಾನ ಪುನಿತ್ ಸಂಸ್ಮರಣೆಗೈದರು.

Click Here

ಸಭೆಯಲ್ಲಿ ಸಂಘಟನೆ ಪದಾಧಿಕಾರಿಗಳು ಹಣತೆ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ‌ ಮನೋಹರ್ ಪೂಜಾರಿ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ವೇ.ಮೂ.ದೇವದತ್ತ ಭಟ್ ಕೋಟ, ಜೆ.ಸಿ.ಐ ಸಂಪನ್ಮೂಲ ವ್ಯಕ್ತಿ ಅಕ್ಷತ ಗಿರೀಶ್, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತ ಪೂಜಾರಿ, ಉಪಾಧ್ಯಕ್ಷರಾದ ದಿನೇಶ್ ಆಚಾರ್ಯ ಮಣೂರು, ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷ ಕಲಾವತಿ ಅಶೋಕ್ ಸ್ವಾಗತಿಸಿದರು. ಸುಜಾತ ಬಾಯರಿ ನಿರೂಪಿಸಿದರು. ಅಜಿತ್ ಆಚಾರ್ಯ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು

Click Here

LEAVE A REPLY

Please enter your comment!
Please enter your name here