ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕನ್ನಡಕ್ಕಾಗಿ, ಕನ್ನಡ ನಾಡಿಗೋಸ್ಕರ ಬಹಳಷ್ಟು ಹೋರಾಟಗಳು ನಡೆದಿದೆ. ಸಾವಿರಾರು ವರ್ಷದ ಇತಿಹಾಸ ಕನ್ನಡ ಭಾಷೆಗೆ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು, ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆ ಸುಂದರವಾದ ಭಾಷೆ. ಭೌಗೋಳಿಕವಾಗಿ ಸಂಪದ್ಭರಿತವಾಗಿ, ಸುಂದರವಾಗಿರುವ ಕರ್ನಾಟಕ ವನ್ಯಜೀವಿಗಳು, ಇತಿಹಾಸವುಳ್ಳ, ಶಿಲ್ಪಕಲೆ, ಸಾಹಿತ್ಯವನ್ನು ಒಳಗೊಂಡಂತ ನಾಡು. ಈ ನಾಡಿನಲ್ಲಿ ಹುಟ್ಟಿ ಬೆಳೆಯುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದು ಕುಂದಾಪುರದ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ಕನ್ನಡ ಭಾಷೆ ಬೆಳೆಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು, ಬೆಳೆಯಬೇಕು. ಹಾಗಾಗಿ ನಾವೆಲ್ಲರೂ ಪ್ರಯತ್ನಿಸಬೇಕು. ಬೇಧಭಾವವಿಲ್ಲದೆ ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು ಎಂದು ಯೋಚನೆ ಮಾಡಿದರೆ ಗ್ರಾಮ, ರಾಜ್ಯ, ದೇಶ ಬೆಳೆಯಲು ಸಾಧ್ಯ. ನಾವೆಲ್ಲರೂ ನಂಬರ್ ಒನ್ ಕನ್ನಡಿರಾಗಬೇಕು. ನಂಬರ್ ಒನ್ ಕನ್ನಡಿಗರಾಗಿ ಕನ್ನಡಾಂಬೆಗೆ ಮತ್ತಷ್ಟು ಗೌರವ ಸಿಗುವಂತಾಗಬೇಕು, ಕೀರ್ತಿ ಹೆಚ್ಚಿಸುವಂತಾಗಬೇಕು ಸಹಾಯಕ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶುಭ ಹಾರೈಸಿದರು.
ಡಿವೈಎಸ್‍ಪಿ ಎಚ್.ಡಿ.ಕುಲಕರ್ಣಿ, ತಹಶೀಲ್ದಾರ್ ಪ್ರದೀಪ ಕುರ್ಡೇಕರ್, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಉಪತಹಶೀಲ್ದಾರ್ ವಿನಯ್, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೋ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ವಿವಿಧ ಇಲಾಖೆಯವರು ಉಪಸ್ಥಿತರಿದ್ದರು.
ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರ್ವಹಿಸಿದರು. ಪೆÇಲೀಸರಿಂದ ಕನ್ನಡ ನಿರೂಪಣೆಯಲ್ಲಿ ಕವಾಯತು ನಡೆಯಿತು. ಕುಂದಾಪುರ ನಗರ ಠಾಣೆಯ ಎಸ್‍ಐ ನಂಜಾನಾಯ್ಕ್ ನೇತೃತ್ವ ವಹಿಸಿದ್ದರು.











