ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ ‌ವತಿಯಿಂದ‌ ಮನೆ ಹಸ್ತಾಂತರ

0
440

Click Here

Click Here

ಕುಂದಾಪುರ ಮಿರರ್ ಸುದ್ದಿ…
ಬೈಂದೂರು:
ಇಲ್ಲಿನ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‍ನ 9ನೇ ವರ್ಷದ ಟ್ರಸ್ಟ್ ದಿನಾಚರಣೆ ಸಂದರ್ಭ ಬಿಜೂರು ಶೇಡಿಮಕ್ಕಿಮನೆ ಗಂಗಮ್ಮ ವೆಂಕಹಿತ್ಲು ಕುಟುಂಬಕ್ಕೆ ಶ್ರೀ ರಾಮ ಗೃಹ ನಿರ್ಮಾಣ ಯೋಜನೆಯಡಿ ಉಚಿತವಾಗಿ ನಿರ್ಮಿಸಿಕೊಡಲಾದ ಮನೆಯನ್ನು ಹಸ್ತಾಂತರಿಸಲಾಯಿತು.

Click Here

ಬೆಂಗಳೂರು ರಾಮರಾಜ ಕ್ಷತ್ರಿಯ ಸಮಾಜದ ಮಾಜಿ ಅಧ್ಯಕ್ಷ ಡಿ. ಕೆ. ಮಂಜುನಾಥ ನೂತನ ಗೃಹವನ್ನು ಉದ್ಘಾಟಿಸಿದರು. ನಿವೃತ್ತ ಕರ್ನಲ್ ಡಿ. ಕೆ. ನರಸಿಂಹ ನಾಯಕ್ ಬೆಂಗಳೂರು, ಸ್ವರ್ಣವಲ್ಲಿ ರಾಮಕ್ಷತ್ರಿಯ ಸೀಮಾ ಪರಿಷತ್ನ ಅಧ್ಯಕ್ಷರಾದ ಸುರೇಶ್ ಕೃಷ್ಣ ನಾಯ್ಕ್ ಪುನಾ, ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್, ಟ್ರಸ್ಟಿಗಳಾದ ಬಿ. ಶ್ರೀನಿವಾಸ ಶೇರೆಗಾರ್, ಬಿ. ಶ್ರೀಧರ ಪಡುವರಿ, ಶ್ರೀನಿವಾಸ ಜಿ. ಶಿವಮೊಗ್ಗ, ವೆಂಕಟೇಶ ಕೆ.ಟಿ ಬಿಜೂರು, ಹೆಚ್. ಸುಬ್ರಾಯ ಶೇರೆಗಾರ್, ಜಯಾನಂದ ಹೋಬಳಿದಾರ್, ಜಯಂತಿ ನಾರಾಯಣ ರಾವ್,ಗೋಪಾಲಕೃಷ್ಣ ಕಲ್ಮಕ್ಕಿ, ಶ್ರೀಧರ ಪಿ. ಪಡುವರಿ, ಅಶೋಕ ಕುಮಾರ್ ಬಾಡ, ಚಂದ್ರಶೇಖರ ಕಲ್ಪತರು, ಕೃಷ್ಣಯ್ಯ ವಿ. ಮದ್ದೋಡಿ, ವೆಂಕಟರಮಣ ಬಿಜೂರು ಉಪಸ್ಥಿತರಿದ್ದರು. ಸಂಚಾಲಕರಾದ ಆನಂದ ಮದ್ದೋಡಿ. ಕೇಶವ ನಾಯ್ಕ್ ಬಿಜೂರು, ವೆಂಕಟರಮಣ ಮಯ್ಯಾಡಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here