ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚೆಗೆ ಗೆಳೆಯರ ಬಳಗ ಕಾರ್ಕಡ ಇದರ 33ನೇ ವಾರ್ಷಿಕ ಮಹಾಸಭೆಯು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರ ಅಧ್ಯಕ್ಷತೆಯಲ್ಲಿ ಜರಗಿತು.
ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಚಂದ್ರಕಾಂತ ನಾಯರಿ ಹಾಗೂ ಆಯವ್ಯಯ ಕೋಶಾಧಿಕಾರಿ ಕೆ.ನಾಗರಾಜ ಉಪಾಧ್ಯ ಸಭೆಯಲ್ಲಿ ಮಂಡಿಸಿದರು. ನಂತರ ಕಾರ್ಯಕಾರಿಣಿ ಸಭೆಯಲ್ಲಿ 3 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ.ತಾರಾನಾಥ ಹೊಳ್ಳ ಪುನರಾಯ್ಕೆಗೊಂಡರೆ, ಉಪಾಧ್ಯಕ್ಷ ಕೆ.ಶಶಿಧರ ಮಯ್ಯ ಕಾರ್ಯದರ್ಶಿ ಕೆ .ಶೀನ ,ಜೊತೆ ಕಾರ್ಯದರ್ಶಿ ಕೆ. ಶ್ರೀಕಾಂತ ಐತಾಳ.ಖಜಾಂಚಿ ನಾಗರಾಜ ಉಪಾಧ್ಯ,
ಕಾರ್ಯಕಾರಿ ಸಮಿತಿ ಕೆ.ಚಂದ್ರಕಾಂತ ನಾಯರಿ, ಕೆ.ಜಗದೀಶ ಆಚಾರ್ಯ,ಕೆ. ಶ್ರೀಪತಿ ಆಚಾರ್ಯ, ಕೆ.ಎನ್.ತಮ್ಮಯ್ಯ, ಕೆ. ಉದಯ ಐತಾಳ, ಕೆ. ರಾಘವೇಂದ್ರ ಹಾಗೂ ಕೆ. ನಾಗಭೂಷಣ ಬ್ರಹ್ಮ ಉಪಸ್ಥಿತಿತರಿದ್ದರು.











