ಕುಂದಾಪುರ ಮಿರರ್ ಸುದ್ದಿ…

ಬ್ರಹ್ಮಾವರ :ಬ್ರಿಟಿಷರು ತಮಗೆ ಬೇಕಾದ ಹಾಗೆ ಕಾನೂನು ರಚಿಸಿದ್ದರು. ಎಷ್ಟೋ ವರ್ಷಗಳಿಂದ ಅದನ್ನೇ ಬಳಸುತ್ತಿದ್ದೇವೆ. ಆದರೆ ಕಳೆದ ಒಂದು ವರ್ಷದ ಹಿಂದೆ ಅದನ್ನುನಾವು ನಮ್ಮ ವ್ಯವಸ್ಥೆಗೆ ತಕ್ಕಂತೆ ಬದಲಿಸಿದ್ದೇವೆ. ಕಾನೂನು ಪುಸ್ತಕ ಕೇವಲ ಆ ಕ್ಷೇತ್ರದಲ್ಲಿ ಇರುವವರು ಮಾತ್ರ ಓದುವುದಲ್ಲ. ನಮ್ಮ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೆಲ್ಲರೂ ಓದಬೇಕು. ಕಾನೂನಿನ ಜ್ಞಾನ ಇದ್ದಲ್ಲಿ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗಲಿದೆ. ನನ್ನನ್ನು ಕ್ರೈಂ ಸ್ಪೆಶಲಿಷ್ಟ್ ಎಂದು ಮಾದ್ಯಮಗಳು ಬರೆದಿದ್ದಾರೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಕೀರ್ತಿ ಕಲಶ ಮಾಹಾ ಗೌರವ ಸ್ವೀಕರಿಸಿದ ಮುಂಬಯಿಯ ನಿವೃತ್ತ ಎಸಿಪಿ ದಯಾನಂದ ನಾಯಕ್ ನುಡಿದರು.
ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಶನಿವಾರ ಕೋಟ ಗಿಳಿಯಾರಿನ ಜನಸೇವಾ ಟ್ರಸ್ಟ್ ವತಿಯಿಂದ ದಿ.ಅಪ್ಪಣ್ಣ ಹೆಗ್ಡೆ ವೇದಿಕೆಯಲ್ಲಿ ನಡೆದ 9 ನೇ ವರ್ಷದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅಭಿಮತ ಸಂಭ್ರಮದ ಕೀರ್ತಿ ಕಲಶ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದೇಶಗಳಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಇರುವುದರಿಂದ ಅಲ್ಲಿ ಅಪರಾಧ ಸಂಖ್ಯೆ ಕಡಿಮೆ ಇದೆ. ನಮ್ಮ ದೇಶದಲ್ಲಿಯೂ ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಪಡೆಯನೇಕು. ಇಂತಹ ಸಂಘ ಸಂಸ್ಥೆಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಕಾನೂನಿನ ಮಾಹಿತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಅವರು ಆಶಿಸಿದರು.
ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ ಅಶಕ್ತರನ್ನು ಗುರುತಿಸಿ ಹಣ ಇರುವವರಿಂದ ಸಂಗ್ರಹಿಸಿ ನೀಡುವ ಶ್ಲಾಘನೀಯ ಕೆಲಸ ಎಂದು ಹೇಳಿದರು.
ಇದಕ್ಕೂ ಮುನ್ನ ಉದ್ಯಮಿ ಬರೋಡ ಶಶಿಧರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಹಿರಿಯ ಸೂಲಗಿತ್ತಿ ಲಕ್ಷ್ಮೀ ಪೂಜಾರಿ ಗುಂಡಿಗೋಳಿ, ಮತ್ತು ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದಕ್ಕೆ ಯಶೋಗಾಥೆ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟದ ದೇವಕಿ ಪೂಜಾರಿ ಅವರಿಗೆ ಸ್ವಂತ ಮನೆಯನ್ನು ನಿರ್ಮಿಸಿ ಕೊಟ್ಟು ಮನೆಯ ಕೀಯನ್ನು ಹಸ್ತಾಂತರಿಸಲಾಯಿತು.
ಬ್ರಹ್ಮಾವರದ ಅಂಜಲಿ ವಿಜಯಲಕ್ಷ್ಮೀ ಸಾರೀಸ್‌ನ ಅಂಜಲಿ ವಿಜಯ್, ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜ , ಮುಂಬಯಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಚೆಯರ್ ಮೆನ್ ಸೂರ್ಯಕಾಂತ ಜಯಸುವರ್ಣ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ ಕಾರಂತ, ಯುನಿವರ್ಸಲ್ ಸಮೂಹ ಸಂಸ್ಥೆಯ ಚೆಯರ್ ಮ್ಯಾನ್ ಉಪೇಂದ್ರ ಶೆಟ್ಟಿ, ಬೆಂಗಳೂರಿನ ಉದ್ಯಮಿ ಪ್ರಶಾಂತ ಶೆಟ್ಟಿ, ಗಿಳಿಯಾರುವಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕೆ.ಹೆಗ್ಡೆ, ಉದ್ಯಮಿಗಳಾದ ಬೇಳೂರು ರಾಘವೇಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಆದರ್ಶ ಶೆಟ್ಟಿ ಮುಂಬಯಿ, ಬೆಂಗಳೂರು ಅಭಯ ಫೌಂಡೇಶನ್‌ನ ಪ್ರವರ್ತಕ ಉಮೇಶ ಶೆಟ್ಟಿ ಮಂದಾರ್ತಿ, ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಟಾನದ ಅಧ್ಯಕ್ಷ ಡಾ. ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ಬೆಂಗಳೂರಿನ ಪಟ್ಲ ಫೌಂಡೇಶನ್‌ನ ಅಮರ್ ಶೆಟ್ಟಿ ಮಂದಾರ್ತಿ ಇದ್ದರು.
ಜನಸೇವಾ ಟ್ರಸ್ಟ್‌ನ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಂಗಳೂರಿನ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ರಾಘವೇಂದ್ರ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಕಲಾವಿದರಿಂದ ನೃತ್ಯೋಪಾಸನೆ ಶಾಸ್ತ್ರೀಯ ಮತ್ತು ಅರೆ ಶಾಸ್ತ್ರೈ ನೃತ್ಯಗಳು ನಡೆಯಿತು. ನಂತರ ನಿರೂಪಕಿ ಅನುಶ್ರೀ ನಿರೂಪಣೆಯಲ್ಲಿ ಖ್ಯಾತ ಸಂಗೀತ ಕಲಾವಿದ ವಿಜಯ ಪ್ರಕಾಶ್ ಅವರಿಂದ ಸಿಂಗಾರ ಸಿರಿ ಸಂಗೀತ ರಸಮಂಜರಿ ನಡೆಯಿತು.
ಭಾಷೆಗೆ ಭಾವನೆ ಮುಖ್ಯ. ಸಿನಿಮಾ ಕೇವಲ ಮನೋರಂಜನೆ ಮಾತ್ರ ಸೀಮಿತವಾಗಿಲ್ಲ. ಎಷ್ಟೋ ಕಲಾವಿದರಿಗೆ ಮತ್ತು ಜನರಿಗೆ ಉದ್ಯೋಗ ಕಲ್ಪಿಸಿದೆ – ರಿಷಭ್ ಶೆಟ್ಟಿ












