ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪಿಯು ಕಾಲೇಜು – ಬೈಂದೂರು, ಕುಂದಾಪುರ ತಾಲ್ಲೂಕಿನಲ್ಲಿ ಅಗ್ರಶ್ರೇಣಿ

0
13

Click Here

Click Here

ಕುಂದಾಪುರ ಮಿರರ್ ಸುದ್ದಿ…

ಹೆಮ್ಮಾಡಿ: ಕೇಂದ್ರ ಸರಕಾರದ ಎನ್ ಟಿ ಎ ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ 2026ರ ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಬೈಂದೂರು, ಕುಂದಾಪುರ ತಾಲ್ಲೂಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

Click Here

ವಿದ್ಯಾರ್ಥಿಗಳಾದ ಧೀರಜ್ ಜಿ.ಡಿ 99.3604 ಪರ್ಸಂಟೈಲ್, ಮಾನ್ಯ ಪೂಜಾರಿ 98.6832 ಪರ್ಸಂಟೈಲ್, ಶ್ರೇಯಸ್ ಪಿ ಗಾಣಿಗ 98.4693 ಪರ್ಸಂಟೈಲ್, ಶ್ರೀರಾಮ್ ಪಿ ಭಟ್ 97.4402 ಪರ್ಸಂಟೈಲ್, ಶ್ರೀಧಾನ್ ಎಂ ಶೆಟ್ಟಿ 97.5834 ಪರ್ಸಂಟೈಲ್, ನಹುಷ್ ಚಂದ್ರ ಬಿಲ್ಲವ 96.1127, ಆಯುಷ್ ಯು ಮೆಂಡನ್ 96.1817 ಪರ್ಸಂಟೈಲ್ ಅಂಕಗಳಿಸಿ ಸಾಧನೆ ಮೆರೆದಿದ್ದಾರೆ.

ಗ್ರಾಮೀಣ ಭಾಗವಾದ ಹೆಮ್ಮಾಡಿ, ಬೈಂದೂರು, ಕುಂದಾಪುರದ ಅನೇಕ ವಿದ್ಯಾರ್ಥಿಗಳು ಜೆಇಇ ಮೈನ್ಸ್ ಪರೀಕ್ಷೆಗೆ ತರಬೇತಿ ಪಡೆಯಲು ದೂರದ ಕಾರ್ಕಳ, ಮಂಗಳೂರಿಗೆ ತೆರಳಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕುಂದಾಪುರ ಭಾಗದ ಪ್ರತಿಷ್ಠಿತ ಸಂಸ್ಥೆಯಾದ ಜನತಾ ಪಿಯು ಕಾಲೇಜಿನಲ್ಲಿ ನುರಿತ ಉಪನ್ಯಾಸಕರ ಸತತ ಮಾರ್ಗದರ್ಶನದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೂ ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೇವೆ ಎಂಬ ಆತ್ಮವಿಶ್ವಾಸವನ್ನು ಜನತಾ ವಿದ್ಯಾಸಂಸ್ಥೆ ಮೂಡಿಸಿದೆ.

Click Here

LEAVE A REPLY

Please enter your comment!
Please enter your name here