ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿಯಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ತಹಶೀಲ್ದಾರ್ ಅವರು ಲಿಖಿತ ಭರವಸೆ ಮೇರೆಗೆ ಧರಣಿ ಅಂತ್ಯ

0
283

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಆಲೂರು ಮತ್ತು ಹರ್ಕೂರು ಹಾಗೂ ಸ್ಥಳೀಯ 13 ಕೊರಗ ಸಮುದಾಯದ ಕುಟುಂಬಗಳಿಗೆ ಈಗಾಗಲೇ ಗುರುತಿಸಿರುವ ಭೂಮಿಗೆ ಮಂಜೂರಾತಿ ನೀಡಿ ಹಕ್ಕುಪತ್ರ ನೀಡಲು ಆಗ್ರಹಿಸಿ ಕುಂದಾಪುರ ತಹಶೀಲ್ದಾರ್ ಕಛೇರಿ ಎದುರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ತಹಶೀಲ್ದಾರ್ ಅವರು ಲಿಖಿತ ಭರವಸೆ ಮೇರೆಗೆ ಧರಣಿ ಅಂತ್ಯ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಳೆದ 2016 ರಿಂದ ನಿರಂತರವಾಗಿ 10 ವರ್ಷಗಳ ಕಾಲ ಆಲೂರು-ಹರ್ಕೂರು ಗ್ರಾಮದಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ ಹಾಗೂ ಸರಕಾರಿ ಭೂಮಿಯಲ್ಲಿ ಡಾ. ಮಹಮ್ಮದ್ ಫೀರ್ ವರದಿ ಅನ್ವಯ ಕನಿಷ್ಟ ತಲಾ ಒಂದು ಎಕರೆಯಂತೆ 13 ಕೊರಗ ಕುಟುಂಬಗಳಿಗೆ ಭೂಮಿ ನೀಡಲು ಸಾಕಷ್ಟು ಬಾರಿ ಧರಣಿ, ಮನವಿ ನೀಡುತ್ತಾ ಬಂದಿದ್ದೆ. ಆಲೂರು ಹರ್ಕೂರು ಗ್ರಾಮದಲ್ಲಿ ಭೂಮಿ ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಕೈಚೆಲ್ಲಿ ಕುಳಿತಾಗ ಆದಿವಾಸಿ ಸಂಘಟನೆಯು ಕೊರಗ ಸಮುದಾಯದ ಮುತುವರ್ಜಿಯಿಂದ ಸ್ವತಹ ಭೂಮಿ ಗುರುತಿಸಿ ತಾಲೂಕು ಆಡಳಿತಕ್ಕೆ ದಾಖಲೆಗಳು ಸಲ್ಲಿಸಿದಾಗ ಜಂಟಿ ಸರ್ವೆ ನಡೆಸಲಾಗಿತ್ತು. ಪ್ರಸ್ತುತವಾಗಿ ಸರ್ವೆನಕ್ಷೆ, ಮಹಜರು, ಹೇಳಿಕೆ, ಗ್ರಾಮ ಆಡಳಿತ ಅಧಿಕಾರಿಯವರು ಮತ್ತು ವಂಡ್ಸೆ ಕಂದಾಯ ನೀರಿಕ್ಷಕರ ವರದಿ ಸಹ ತಾಲೂಕು ಆಡಳಿತದ ಕೈ ಸೇರಿದೆ. ಆದರೂ ಸಹ ಇದುವರೆಗೆ ಭೂಮಿಗೆ ಹಕ್ಕು ಪತ್ರ ನೀಡಲು ಬೇಕಾದ ಪ್ರಕ್ರಿಯೇ ನಡೆದಿಲ್ಲ. ಇದುವರೆಗೆ ಹಕ್ಕು ಪತ್ರ ನೀಡಲು ವಿಳಂಬವಾಗಿದೆ. ಈ ತಿಂಗಳ ಮೊದಲ ವಾರದಲ್ಲಿ ತಮಗೆ ಮನವಿ ನೀಡಿದಾಗ 10 ದಿನದಲ್ಲಿ ಮಂಜೂರಾತಿ ಪ್ರಕ್ರೀಯೆಗೆ ಬೇಕಾದ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿರುತ್ತಾರೆ. ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ. ಹಾಗಾಗಿ ನ್ಯಾಯಯುತ ಬೇಡಿಕೆ ಈಡೇರುವವರೆಗೆ ತಹಶೀಲ್ದಾರ್ ಕಛೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ತಹಶೀಲ್ದಾರ್ ಅವರಿಗೆ ನೀಡಿರುವ ಮನವಿಯಲ್ಲಿ ಕೊರಗ ಸಮುದಾಯದ ಭೂಮಿಯ ಹಕ್ಕಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸವೇ ನಕ್ಷೆಯಲ್ಲಿ ಇರುವಂತೆ ಆಲೂರು ಹರ್ಕೂರು ಮತ್ತು ಸ್ಥಳೀಯ 13 ಕೊರಗ ಸಮುದಾಯದ ಕುಟುಂಬಗಳಿಗೆ ಭೂಮಿ ಮಂಜೂರುಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿದೆ.
ಕುಂದಾಪುರ ತಹಶೀಲ್ದಾರ್ ಕಛೇರಿ ಎದುರು ದಿನಾಂಕ : 23, ಫೇಬ್ರವರಿ,2026 ಸೋಮವಾರ ಬೆಳಿಗ್ಗೆ 10:30 ರಿಂದ ಧರಣಿ ಆರಂಭವಾಗಿತ್ತು. ಸಮಾಜ ಕಲ್ಯಾಣ ಇಲಾಖೆಯವರು ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಕಂದಾಯ ಇಲಾಖೆ ಸಮನ್ವಯತೆಯಲ್ಲಿ ಅಗತ್ಯ ಕ್ರಮ ವಹಿಸುದಾಗಿ ತಿಳಿಸಿರುತ್ತಾರೆ.

Click Here

ಸಂಜೆ ತಹಶೀಲ್ದಾರ್ ಅವರು ಧರಣಿ ನಿರತರಲ್ಲಿ ಅಹವಾಲು ಆಲಿಸಿ ಆಲೂರು ಗ್ರಾಮದಲ್ಲಿ ಖಾದಿರಿಸಿರುವ ಭೂಮಿಯಲ್ಲಿ ಗೇರು ನಿಗಮದ ನಡುತೋಪು ಇರುವುದರಿಂದ ಅವರ ಅಭಿಪ್ರಾಯ ಕೇಳುವುದು ಅಗತ್ಯವಿದೆ. ಹಾಗಾಗಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಯಾವುದೇ ಉತ್ತರ ಬಂದಿಲ್ಲ. ಆದರಿಂದ ನಿಮ್ಮ ಸಮ್ಮುಖದಲ್ಲಿ ಇದೊಂದು ಪತ್ರ ಬರೆದು ಮಾರ್ಚ್ 5 ರ ಒಳಗಾಗಿ ಉತ್ತರ ನೀಡದಿದ್ದಲ್ಲಿ ಮಂಜೂರಾತಿ ನೀಡಲಾಗುತ್ತದೆ. ಅಲ್ಲದೆ ಧರಣಿ ನಿರತರಿಗೂ ಪತ್ರ ಲಿಖಿತ ಭರವಸೆ ನೀಡಿರುವ ಹಿನ್ನಲೆಯಲ್ಲಿ ಧರಣಿ ಹಿಂದೆ ತೆಗೆದುಕೊಳ್ಳಲಾಯಿತ್ತು.

ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ರಾಜ್ಯ ಸಮಿತಿ ಸದಸ್ಯ ಗಣೇಶ ಆಲೂರು, ಕೊರಗ ನಾರ್ಕಳಿ, ಚಂದ್ರಾವತಿ ಬ್ರಹ್ಮೇರಿ, ಸುರೇಶ ಆಲೂರು, ನಾಗರತ್ನ, ಜಯಲಕ್ಷ್ಮಿ, ಸಾಧು ನಾರ್ಕಳಿ, ರೇಷ್ಮಾ ನಾಡ, ಹಾಗೂ ಕಾರ್ಮಿಕ ಮುಖಂಡರಾದ ಸುರೇಶ್ ಕಲಾಗಾರ್, ಚಂದ್ರಶೇಖರ, ಮಹಾಬಲ ವಡೆರೋಬಳಿ, ಎಚ್ ನರಸಿಂಹ, ಜನಾವಾದಿ ಮಹಿಳಾ ಸಂಘಟನೆ ಮುಖಂಡರಾದ ಶೀಲಾವತಿ, ನಾಗರತ್ನ ನಾಡ ಉಪಸ್ಥತರಿದ್ದರು.

Click Here

LEAVE A REPLY

Please enter your comment!
Please enter your name here