ಕೆಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಶೈಲಾ ಅಲ್ಮೆಡಾ ಆಯ್ಕೆ.

0
106

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ 12 ಚರ್ಚುಗಳನ್ನು ಒಳಗೊಂಡ ಕೆಥೋಲಿಕ್ ಸಭಾ ವಲಯ ಸಮಿತಿಯ 2026 – 2027 ನೇ ಅವಧಿಯ ಪದಾಧಿಕಾರಿಗಳ ಚುನಾವಣೆ ಸೇಂಟ್ ಮೇರಿಸ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಹೋಲಿ ರೋಜರಿ ಚರ್ಚ್ ಕುಂದಾಪುರದ ಶಿಕ್ಷಕಿ ಶೈಲಾ ಅಲ್ಮೆಡ ರವರು ಸರ್ವಾನುಮತಿಯಿಂದ ಆಯ್ಕೆಯಾದರು.

Click Here

ನಿಕಟ ಪೂರ್ವ ಅಧ್ಯಕ್ಷರಾಗಿ ರೇಮಿ ಫೆರ್ನಾಡಿಸ್ ಹಂಗಳೂರು , ನಿಯೋಜಿತ ಅಧ್ಯಕ್ಷರಾಗಿ ಅಲೆಕ್ಸಾಂಡರ್ ಲೂಯಿಸ್ ಹಂಗಳೂರು , ಉಪಾಧ್ಯಕ್ಷರಾಗಿ ಜಾನ್ ಅಲ್ಮೇಡಾ ತ್ರಾಸಿ , ಪ್ರಧಾನ ಕಾರ್ಯದರ್ಶಿಯಾಗಿ ಮರಿಯ ಡಿಸಿಲ್ವಾ ಬಸ್ರೂರು ,ಸಹ ಕಾರ್ಯದರ್ಶಿಯಾಗಿ ಡೈನಾ ಸೇರಾವೋ ಕೋಟೇಶ್ವರ. ಕೋಶಾಧಿಕಾರಿಯಾಗಿ ರೀಟಾ ಕ್ವಾಡರ್ಸ್ ಹಂಗಳೂರು , ಸಹ ಕೋಶಾಧಿಕಾರಿಯಾಗಿ ಐರಿನ್ ಮೆಂಡೊನ್ಸಾ ತಲ್ಲೂರು, ಸಂದೇಶ ಪ್ರತಿನಿಧಿಯಾಗಿ ಮೇಬಲ್ ಡಿಸೋಜಾ ಬಸ್ರೂರು , ರಾಜಕೀಯ ಸಂಚಾಲಕರಾಗಿ ರೋಷನ್ ಬರೆಟ್ಟೊ ಹಂಗಳೂರು , ಸರ್ಕಾರಿ ಸೌಲತ್ ಸಂಚಾಲಕರಾಗಿ ವಿಲ್ಸನ್ ಅಲ್ಮೆಡಾ ಕುಂದಾಪುರ , ಸ್ತ್ರೀ ಸಶಕ್ತಿ ಸಂಚಾಲಕರಾಗಿ ಆಶಾ ಕರ್ವಾಲ್ಲೊ ಕುಂದಾಪುರ ಆಯ್ಕೆಯಾದರು .

ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಚುನಾವಣಾ ಅಧಿಕಾರಿ ಲೂಯಿಸ್ ಡಿಸೋಜಾ ರವರು ಚುನಾವಣೆ ಪ್ರಕ್ರಿಯೆಯನ್ನು ನಡೆಸಿದರು.

Click Here

LEAVE A REPLY

Please enter your comment!
Please enter your name here