ಉಡುಪಿ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿದ ಶೂನ್ಯ ಬಜೆಟ್: ಸುರೇಶ್ ಕಲ್ಲಾಗರ

0
482

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜಿಲ್ಲೆಯ ಜನತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಅವರ ಮತ್ತೊಂದು ದಾಖಲೆಯ ಶೂನ್ಯ ಬಜೆಟ್ ಆಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಜನ ಆಗ್ರಹಿಸುತ್ತಿದ್ದರೂ ಹೋರಾಟ ನಡೆಸುತ್ತಿದ್ದರೂ ಬಜೆಟ್ ನಲ್ಲಿ ಏನೂ ನೀಡಿಲ್ಲ.
ಜಿಲ್ಲೆಯಲ್ಲಿ ಹೊಸ ತಾಲೂಕುಗಳು ರಚನೆಗೊಂಡು ಹಲವು ವರ್ಷಗಳು ಕಳೆದರೂ ಅಂತಹ ತಾಲೂಕುಗಳಲ್ಲಿ ಸ್ಥಳೀಯ ಜನರು ಮುಂದೆಯೂ ಹಳೆ ತಾಲೂಕು ಕೇಂದ್ರಗಳ ಪ್ರಮುಖ ಕಚೇರಿಗಳಿಗೆ ಅಲೆದಾಟ ನಡೆಸ ಬೇಕಾಗಿ ಬಂದಿದೆ.
ಬೈಂದೂರು ತಾಲೂಕುನಲ್ಲಿ ನ್ಯಾಯಾಲಯ, ತಾಲೂಕು ಆಸ್ಪತ್ರೆ,ಕಾರ್ಮಿಕ ನಿರೀಕ್ಷಕಕರ ಕಚೇರಿ ಮಂಜೂರಾತಿ ಮಾಡಲಾಗಿಲ್ಲ.ಬ್ರಹ್ಮಾವರ ತಾಲೂಕಿಗೂ ಇದೇ ರೀತಿಯಲ್ಲಿ ಆದ್ಯತೆ ನೀಡಿಲ್ಲ.ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮುಂತಾದ ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಶಾಲ ಸರ್ಕಾರಿ ಭೂಮಿಗಳಿದ್ದರೂ ಕಟ್ಟಡಗಳಿದ್ದರೂ ಮೇಲ್ದರ್ಜೆಗೆ ಏರಿಸುವುದು ಹಾಗೂ ಪ್ರತಿದಿನ ವೈದ್ಯರನ್ನು ನೇಮಿಸಿ ಜನರಿಗೆ ಆರೋಗ್ಯ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಬಜೆಟ್ ನ್ಯಾಯ ಒದಗಿಸಿಲ್ಲ ಉಡುಪಿ ತಾಲೂಕಿನಲ್ಲಿ ಕುಡಿಯುವ ನೀರಿನ ನಿರಂತರ ಸಮಸ್ಯೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಆದ್ಯತೆ ನೀಡಿಲ್ಲ. ಬ್ರಹ್ಮಾವರ ಕ್ರಷಿ ಕಾಲೇಜು ಮೇಲ್ದರ್ಜೆಗೇರಿಸಲು ಕ್ರಮ ಇಲ್ಲ. ಕೋಡಿ- ಕುಂದಾಪುರ ಸೇತುವೆ, ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಪುರಸಭೆಗಳ ವ್ಯಾಪ್ತಿಯಲ್ಲಿ ಕೊಳಚೆ ನೀರಿನ ವಿಲೇವಾರಿಗೆ ಕ್ರಮ ಇಲ್ಲ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ ಓಡಿಸಲು ಜನರು ಹೋರಾಟ ನಡೆಸಿದರೂ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡದಿರುವುದು ಜಿಲ್ಲೆಯ ಜನತೆಗೆ ಮಾಡಿದ ಅನ್ಯಾಯ ಆಗಿದೆ.
ಖಾಸಗಿ ಸಾರಿಗೆ ಚಾಲಕರಿಗೆ ಕಲ್ಯಾಣ ಮಂಡಳಿ, ಮೀನುಗಾರರಿಗೆ ಕಲ್ಯಾಣ ಮಂಡಳಿ ಬೇಕೆಂಬ ಒತ್ತಾಯ ಇದ್ದರೂ ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ.
ಕರಾವಳಿಯ ಗಂಗೊಳ್ಳಿ ಮಲ್ಪೆ ಬಂದರುಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಇಲ್ಲ.
ಪ್ರವಾಸೋದ್ಯಮ ಬಗ್ಗೆ ಪ್ರಸ್ತಾಪಿಸಿರುವ ಬಜೆಟ್ ಇದು ಖಾಸಗೀಯವರಿಗೆ ಬಂದರುಗಳನ್ನು ಮಾರಾಟ ಮಾಡುವ ಸಂಚೆ ವಿನಃ ಬೇರೆನೂ ಅಲ್ಲ ಎಂದು ಸಿಪಿಎಂ ದೂರಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಮಾಡುವ ಹುನ್ನಾರ ಕೋಟ್ಯಂತರ ರೂಪಾಯಿ ಹಣವನ್ನು ಕಾಮಗಾರಿಗಳಿಗೆ ಬಳಸಿ ಕಮಿಷನ್ ಹೊಡೆಯಲು ಮಾಡಿದ ದಂಧೆ ಅದರ ಬದಲಾಗಿ ಕಳೆದ 3 ವರ್ಷಗಳಿಂದ ಬಾಕಿ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಿದ ಮಕ್ಕಳಿಗೆ ಧನ ಸಹಾಯ ನೀಡಲು ಕ್ರಮವಹಿಸಬಹುದಿತ್ತು.ಕಾರ್ಮಿಕರಿಗೆ ಭದ್ರತೆ ನೀಡುವ, ಅಪಾಯಕಾರಿ ಲೇಬರ್ ಕೋಡ್ ಹಕ್ಕುಗಳ ರಕ್ಷಣೆ ಮಾಡುವ ಪ್ರಸ್ತಾಪ ಇಲ್ಲ.ಜಿಲ್ಲೆಯಲ್ಲಿ ಸರಕಾರಿ ಕೈಗಾರಿಕೆಗಳನ್ನು ಸ್ಥಾಪಿಸುವ ಯಾವ ಪ್ರಸ್ತಾಪಗಳೂ ಇಲ್ಲದಿರುವುದು
ಕರಾವಳಿಯ ರೈತರನ್ನು ಅವರ ಬೆಳೆಗಳಿಗೆ ಭದ್ರತೆ ಕೊಡದ ಸಿದ್ದರಾಮಯ್ಯ ಅವರ ಬಜೆಟ್ ಮಹಿಳೆಯರಿಗೆ ವಿಶೇಷ ರಕ್ಷಣೆ ನೀಡುವ ಕಠಿಣ ಕ್ರಮಗಳಿಲ್ಲ.
ಸಂಪೂರ್ಣವಾಗಿ ಜನವಿರೋಧಿ ಆಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.

Click Here

LEAVE A REPLY

Please enter your comment!
Please enter your name here