ಪಂಚವರ್ಣ ಸಂಘಟನೆಯ 296ನೇ ವಾರದ ಸ್ವಚ್ಛತಾ ಅಭಿಯಾನ

0
126

Click Here

Click Here

ಭೂಮಿ ಮಲಿನಗೊಳಿಸುವವರು ವಿಕೃತ ಮನಸ್ಥಿತಿಯವರು – ಶಿಕ್ಷಣತಜ್ಞ ಡಾ.ಬಾಲಕೃಷ್ಣ ಶೆಟ್ಟಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಭೂಮಿಯನ್ನು ಮಲಿನಗೊಳಿಸುವ ವಿಕೃತ ಮನಸ್ಥಿತಿಯ ವಿರುದ್ಧ ಶಿಕ್ಷಣ ತಜ್ಞ ಡಾ.ಬಾಲಕೃಷ್ಣ ಶೆಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ , ಸಮುದ್ಯತಾ ಗ್ರೂಪ್ಸ್ ಕೋಟ, ಚಿತ್ತಾರಿ ಟ್ರಸ್ಟ್ ಮಣೂರು ಇವರುಗಳ ಸಯೋಗದೊಂದಿಗೆ ಕೋಟ ಗ್ರಾಮಪಂಚಾಯತ್ ಎಸ್ ಎಲ್ ಆರ್ ಎಂ ಘಟಕ ಇವರ ಸಂಯೋಜನೆಯೊಂದಿಗೆ 296ನೇ ಭಾನುವಾರದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಕೋಟ ಗಿಳಿಯಾರು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ಊರು ಸ್ವಚ್ಛವಾಗಿದ್ದರೆ ಮಾತ್ರ ಮನಸ್ಸು ಶುಚಿಯಾಗಿರಲು ಸಾಧ್ಯ. ಕಂಡಕಂಡಲ್ಲಿ ತ್ಯಾಜ್ಯ ಎಸೆಯುವ ಹೀನ ಮನಸ್ಥಿತಿಯನ್ನು ವಿರುದ್ಧ ಆಕ್ರೋಶ ಹೊರಹಾಕಿ, ನಮ್ಮಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಾರೆ, ಆದರೆ ಪಂಚವರ್ಣದವರು ಮಾಡುವ ಪ್ರತಿ ಭಾನುವಾರ ಪ್ರಕೃತಿ ಮಾತೆಯನ್ನು ಆರಾಧಿಸುವ ಕಾರ್ಯ ಬಹು ಶ್ರೇಷ್ಠವಾದ ಕಾರ್ಯವಾಗಿದೆ. ಇಂತಹ ಮನಸ್ಸಗಳು ಗ್ರಾಮಗ್ರಾಮದಲ್ಲಿ ಪಸರಿಸಿಕೊಳ್ಳಲಿ ಜನರು ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವ ಪ್ರಜ್ಞೆ ಮೂಡಲಿ ಎಂದು ಕರೆ ನೀಡಿದರು.

Click Here

ಸುಮಾರು ಇಪ್ಪತ್ತೈದಕ್ಕೂ ಅಧಿಕ ಚೀಲ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆದ್ದಾರಿಯಿಂದ ಮುಕ್ತಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯದರ್ಶಿ ವಸಂತಿ ಹಂದಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವೀಂದ್ರ ಕೋಟ ಸಂಯೋಜಿಸಿದರು.

Click Here

LEAVE A REPLY

Please enter your comment!
Please enter your name here