ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಬುಧವಾರ ನಡೆಯಿತು.

ಮಣೂರುನಡುಬೆಟ್ಟು, ಬಾಳೆಬೆಟ್ಟು, ಚಿಕ್ಕನ್‍ಕೆರೆ, ಹುಣ್ಸೆಹಾಡಿ,ಕಂಬಳಗದ್ದೆ, ಕಾಸನಗುಂದು, ತೆಂಕಬೆಟ್ಟು, ಕದ್ರಿಕಟ್ಟು, ಕೋಟತಟ್ಟು ಬಾರಿಕೆರೆ, ಪಡುಕರೆ, ಕೊಯ್ಕೂರು, ಹರ್ತಟ್ಟು, ಮಣೂರು ಹಾಗೂ ಕೋಟ ಪೇಟೆ ಭಾಗಗಳಿಂದ ಹೊರೆಕಾಣಿಕೆ ಸಮರ್ಪಿಸಿದರು.
ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಟ್ರಸ್ಟಿಗಳಾದ ಅಶೋಕ ಶೆಟ್ಟಿ, ದಿನೇಶ ಆಚಾರ್ಯ, ರವಿ ಐತಾಳ್, ಕೃಷ್ಣ ದೇವಾಡಿಗ,ಸುಫಲ ಸಿ ಶೆಟ್ಟಿ,ದಿವ್ಯ ಪ್ರಭು,ಅಚ್ಯುತ್ ಹಂದೆ,ಬಾಬು ಜಿ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಅರುಣಾಚಲ ಮಯ್ಯ, ಸ್ಥಳೀಯರಾದ ಭಾರತಿ ವಿಷ್ಣುಮೂರ್ತಿ ಮಯ್ಯ, ಶಿವರಾಮ ಶೆಟ್ಟಿ, ಜಯರಾಮ ಆಚಾರ್ಯ, ನಾಗರಾಜ್ ಅಮೀನ್,ವಸಂತ್ ಸುವರ್ಣ,ಶಿವಾನಂದ ಅಡಿಗ,ಮಹೇಶ್ ಹೊಳ್ಳ,ಪ್ರಸಾದ್ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.











