ಸಾಲಿಗ್ರಾಮ – ಆರಾಧನ ಮೆಲೋಡಿಸ್ ಸಾಲಿಗ್ರಾಮ ವತಿಯಿಂದ ಡಾ. ರಾಜ್ ಆರಾಧನೋತ್ಸವ ಕಾರ್ಯಕ್ರಮ

0
521

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಆರಾಧನ ಮೆಲೋಡಿಸ್ ಸಾಲಿಗ್ರಾಮ ಇವರ ಸಾರಥ್ಯದಲ್ಲಿ ಡಾ. ರಾಜ್ ಆರಾಧನೋತ್ಸವ ಕಾರ್ಯಕ್ರಮ ಶನಿವಾರ ಯಕ್ಷಗಾನ ಕಲಾಕೇಂದ್ರ ಗುಂಡ್ಮಿಯಲ್ಲಿ ಜರಗಿತು.

ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರನಾಥ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

Click Here

ಗುಂಡ್ಮಿ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಗಾಯಕಿ ಮೀನಾ ಕಾರಂತ್ ಉದ್ಯಮಿ ಎಂ.ಸಿ ಚಂದ್ರಶೇಖರ ಪಾಂಡೇಶ್ವರ, ಆರಾಧನಾ ಮೆಲೋಡಿಸ್ ಅಧ್ಯಕ್ಷರಾದ ಸತೀಶ್ ಭಾಗವತ್ ಉಪಸ್ಥಿತರಿದ್ದರು.

ಆರಾಧನಾ ಮೆಲೋಡಿಸ್‍ನ ಗೌರವಾಧ್ಯಕ್ಷ ಅಚ್ಯುತ ಪೂಜಾರಿ ಸ್ವಾಗತಿಸಿದರು. ರೇಡಿಯೋ ನಿರೂಪಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಡಾ. ರಾಜ್ ಆರಾಧನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು ಗಾಯಕರಾದ ಚಂದ್ರಕಾಂತ ನಾಯರಿ,ಅಚ್ಯುತ ಪೂಜಾರಿ, ಸತೀಶ್ ಭಾಗವತ್, ಮಹೇಶ್ ನಾಯರಿ, ವಿಜಯ ಕಾಂಚನ್, ದೀಕ್ಷಾ ಬಸ್ರೂರು, ಅಕ್ಷತಾ ವಿನಯ್, ಮೀನಾ ಕಾರಂತ್,ಭಾಗ9ವಿ, ಧನು ಶ್ರೀ, ಉತ್ತಮವಾಗಿ ಗಾಯನವನ್ನು ಉಣಬಡಿಸಿದರು. ಹಾಗೆ ಕುಮಾರಿ ನಿಶಾ ಸಾಲಿಗ್ರಾಮ ಇವರಿಂದ ಭರತನಾಟ್ಯ ಮತ್ತು ಯಕ್ಷನೃತ್ಯ ಪ್ರದರ್ಶನಗೊಂಡಿತು.

Click Here

LEAVE A REPLY

Please enter your comment!
Please enter your name here