ನಾಗೂರು :ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ : ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಗೆ 625ರಲ್ಲಿ 625

0
696

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಅಂತಿಮ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಬೈಂದೂರು ವಲಯದ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಅಕ್ಷತಾ ನಾಯ್ಕ್ ರಾಜ್ಯದಲ್ಲಿಯೇ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು 625ರಲ್ಲಿ 625 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

Click Here

ಈಕೆ ಶಿಕ್ಷಕ ದಂಪತಿ ನಾಗೇಶ್ ನಾಯ್ಕ್ ಹಾಗೂ ಶಾಲಿನಿ ಇವರ ಪುತ್ರಿ ಪರೀಕ್ಷೆಯ ಮೊದಲ ಎರಡು ತಿಂಗಳಿಂದ ತಯಾರಿ ನಡೆಸಿ ಅಭ್ಯಾಸ ಆರಂಭಿಸಿದ್ದರಿಂದ ಉತ್ತರ ಪತ್ರಿಕೆ ಬರೆಯುವಾಗ ಯಾವುದೇ ರೀತಿಯ ಮಾನಸಿಕ ಒತ್ತಡವಾಗಲೀ, ಭಯವಾಗಲೀ ಆಗಲಿಲ್ಲಾ. ಎಲ್ಲಾ ಪಠ್ಯಗಳನ್ನು ಸರಿಯಾದ ಕ್ರಮದಲ್ಲಿ ಓದಿ ಅರ್ಥಮಾಡಿಕೊಳ್ಳುತ್ತಿದ್ದೆ ಎಂದ ಅಕ್ಷತಾ, ತನ್ನ ಈ ಕಾರ್ಯ ಸಾಧನೆಗೆ ಹೆತ್ತವರ, ಸಹೋದರನ, ಶಾಲಾ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕ ವೃಂದದವರ ಮತ್ತು ಸ್ನೇಹಿತರ ಸಹಕಾರ ಕಾರಣವಾಗಿದ್ದು, ಮುಂದೆ ವೈದ್ಯನಾಗುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.

Click Here

LEAVE A REPLY

Please enter your comment!
Please enter your name here