ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಮಹಿಳಾ ವಿಭಾಗದ ಉಡುಪಿ ಜಿಲ್ಲಾ ಮಹಿಳಾ ವಿಭಾಗ ಉದ್ಘಾಟನೆ

0
440

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಮಹಿಳಾ ವಿಭಾಗದ ಉಡುಪಿ ಜಿಲ್ಲಾ ಮಹಿಳಾ ವಿಭಾಗ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ನಡೆಯಿತು.

ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಕೆ. ಎಸ್. ಕಾರಂತ್ ಮಾತನಾಡಿ ಶ್ರೀ ಗುರು ನರಸಿಂಹನ ವಿಶೇಷ ಪ್ರೀತಿಪಾತ್ರ ಸೇವೆಯಾದ ಶಾಕಲ ಋಕ್ಸಂಹಿತಾಯಾಗದ ಶುಭ ಸಂದರ್ಭದಲ್ಲಿ ಆತನ ಸನ್ನಿಧಿಯಲ್ಲಿ ಉದ್ಘಾಟನೆಗೊಂಡಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಡುಪಿ ಜಿಲ್ಲಾ ಮಹಿಳಾ ವೇದಿಕೆಯು ಸಂಘಟನೆ, ಸಂಸ್ಕಾರ, ಸ್ವಾವಲಂಬನೆಯ ದಿಶೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

Click Here

ಈ ಸಂದರ್ಭದಲ್ಲಿ ಅಶೋಕ್ ಹಾರನಹಳ್ಳಿಯವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಮಹಿಳಾ ವಿಭಾಗ ರಚಿಸಿ,ಇದರ ಜಿಲ್ಲಾ ಸಂಚಾಲಕಿಯನಾಗಿ ಶಾಂತ ಗಣೇಶ್ ರವರನ್ನು ನೇಮಿಸಲಾಯಿತು.

ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ರೂಪ ಶಾಸ್ತ್ರಿ, ಜಿಲ್ಲಾ ಸಂಚಾಲಕಿ, ಶಾಂತಾ ಗಣೇಶ್, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಕೆ. ಸತೀಶ ಹಂದೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ, ಕೂ.ಮ. ಜ. ದ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಗಣೇಶ್ ರಾವ್, ವೈ. ಸದಾರಮ ಹೇರ್ಳೆ ಹಾಗೂ ಭಾರತಿ ಹೇರ್ಳೆ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here