ಗಾಣಿಗ ಪ್ರತಿಷ್ಠಾನ ಬೈಂದೂರು: ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಾಗ್ರಿ ವಿತರಣೆ

0
253

Click Here

Click Here

ಕಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ಇದರ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಾಗ್ರ ವಿತರಣೆ ಕಾರ್ಯಕ್ರಮ ಹಾಗೂ ಸಮಾಜದ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ದಿನಾಂಕ: 07-06-2026ನೇ ಆದಿತ್ಯವಾರ ಬೈಂದೂರಿನ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆಯಲ್ಲಿ ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಣಿಗ ಪ್ರತಿಷ್ಠಾನ ರಿ. ಬೈಂದೂರು ಇದರ ಅಧ್ಯಕ್ಷರಾದ ಕೆ. ರಮೇಶ್ ಗಾಣಿಗ ವಹಿಸಿ ಮಾತನಾಡುತ್ತಾ ಸಮಾಜದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಷ್ಟ ಸ್ಥಾಪಿಸಿ ಕಾರ್ಯಕ್ರಮ ಮಾಡಲಾಗುತ್ತದೆ. ಸಮಜದಲ್ಲಿರುವ ಅಸಾಯಕರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದು, ಸಾಧಕರನ್ನು ಗುರುತಿಸುವ ಕೆಲಸ ಆಗ ಬೇಕಾಗಿದೆ ಆ ನಿಟ್ಟಿನಲ್ಲಿ ಮುಂದೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೈಂದೂರು ಗಂಗನಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ನೆರವೇರಿಸಿ ವಿದ್ಯಾರ್ಥಿಗಳು ಶ್ರಮ ಪಟ್ಟು ಅಭ್ಯಾಸ ಮಾಡ ಬೇಕಾಗಿದೆ. ಉನ್ನತ ವ್ಯಾಸಂಗ ಮಾಡುವತ್ತ ಎಲ್ಲ ವಿದ್ಯಾರ್ಥಿಗಳು ಗಮನ ಹರಿಸ ಬೇಕು. ದುಶ್ಚಟಗಳಿಂದ ದೂರವಾಗಿ ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿಸಿಟ್ಟುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಗಾಣಿಗ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಸತೀಶ್ ಗಾಣಿಗ, ಮುಂಬೈನ ಉದ್ಯಮಿಗಳಾದ ದಿನೇಶ್ ಗಾಣಿಗ, ಚರುಮಕ್ಕಿ, ಶಶೀಸ್ ಮೋಟಾರ್ ಡ್ರೈವಿಂಗ್ ಸ್ಕೂಲ್‍ನ ತರಬೇತುದಾರರಾದ ಶಶಿಧರ ಗಾಣಿಗ, ಬೆಂಗಳೂರು ಉದ್ಯಮಿಗಳಾದ ಪಿ.ಎನ್. ಶ್ರೀಧರ ಉಪಸ್ಥಿತರಿದ್ದರು.
ಕಲಿಕಾ ಸಾಮಾಗ್ರಿಯನ್ನು ತ್ರಾಸಿಯ ಓಂಕಾರ್ ಡೆಂಟಲ್ ನ ದಂತ ವೈದ್ಯರಾದ ಡಾ. ಪ್ರಜ್ವಲ್ ಆರ್.ವಿ. ವಿತರಿಸಿದರು. ಬೆಂಗಳೂರು ಸಿಟಿ ಸಿಸ್ಟಮ್ ಅಡ್ಮಿನ್ ಪೆÇೀಲೀಸ್ ಹೆಡ್ ಕಾನ್ಸ್‍ಟೆಬಲ್ ಮಹಾಲಿಂಗ ಗಾಣಿಗ ಪ್ರತಿಭಾ ಪುರಸ್ಕಾರವನ್ನು ವಿತರಿಸಿದರು.
ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ತಿಮ್ಮಪ್ಪ ಗಾಣಿಗ ತಗ್ಗರ್ಸೆ, ಐ.ಪಿ.ಎಸ್. ಡಾ| ಶ್ರೇಯಸ್ ರಾವ್, ಉಪ್ಪುಂದ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸುಮಂಗಲ ಗಾಣಿಗ, ಕೊಡಪಾಡಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಭಾಸ್ಕರ ಗಾಣಿಗೆ ಕೊಡಪಾಡಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಗೋವಿಂದ ಗಾಣಿಗ ಉಪ್ಪುಂದ, ತಗ್ಗರ್ಸೆ ಹೆಗ್ಗೇರಿ ಕುಲ ಕಸಬುದಾರರು ಹಾಗೂ ಕೃಷಿಕರಾದ ಗೋವಿಂದ ಗಾಣಿಗೆ ಹೆಗ್ಗೇರಿ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‍ನ ನಿವೃತ್ತ ಶಾಖಾಧಿಕಾರಿ ತಗ್ಗರ್ಸೆ ಕಳವಾಡಿಮನೆ ಆನಂದ ಗಾಣಿಗ, ನಾಡ ಹಾಲು ಉತ್ಪಾದಕರ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಟರಮಣ ಗಾಣಿಗ ಕಡ್ಕೆ , ನಿವೃತ್ತ ಬಿ.ಎಸ್.ಎನ್.ಎಲ್. ಟೆಲಿಫೆÇೀನ್ ಟೆಕ್ನಿಷಿಯನ್ ಬಾಬು ಗಾಣಿಗೆ ಮುಳ್ಳಿಕಟ್ಟೆ, ಕುಂದಾಪುರ ಕಾವೇರಿ ಗ್ರಾಮೀಣ ಮಹಿಳಾ ಸಹಕಾರ ಸಂಘ ನಿ, ಇದರ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಕೆ., ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಆದ ರಾಜು ಗಾಣಿಗ ಬೈಂದೂರು, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಸೀತಾರಾಮ ಗಾಣಿಗ, ಬೈಂದೂರು ನೀರಾವರಿ ಇಲಾಖೆ ನಿವೃತ್ತ ನೌಕರರಾದ ಸುರೇಶ್ ಗಾಣಿಗ ಬೈಂದೂರು, ಕೋಟೇಶ್ವರ ಸುಜ್ನಾನ ಪಿ.ಯು. ಕಾಲೇಜಿನ ಚಿತ್ರಕಲಾ ಶಿಕ್ಷಕರಾದ ಗಿರೀಶ್ ಗಾಣಿಗ ತಗ್ಗರ್ಸೆ, ಉದ್ಯಮಿಗಳಾದ ಸೀತಾರಾಮ ಗಾಣಿಗ ತ್ರಾಸಿ, ಸಮಾಜ ಸೇವಕರಾದ ಬಿ ಬಾಬುರಾವ್ ಅರೆಕಲ್ಲು, ಬಿಜೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗಾಣಿಗ ಪ್ರತಿಷ್ಠಾನ ರಿ. ಬೈಂದೂರಿನ ಖಜಾಂಚಿ ಆನಂದ ಗಾಣಿಗ, ಕಾವೇರಿ ಗ್ರಾಮೀಣ ಮಹಿಳಾ ಸೇವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಮನ ಕೆ. ಅತಿಥಿಗಳನ್ನು ಪರಿಚಯಿಸಿದರು. ಟ್ರಷ್ಟಿಗಳಾದ ಪುಟ್ಟಯ್ಯಾ ಗಾಣಿಗ, ನಾಗಪ್ಪ ಗಾಣಿಗ ಶಿರೂರು, ಶ್ರೀಮತಿ ಪ್ರೇಮಾ ವಿ, ಬಾಬುರಾವ್, ರಾಜುಗಾಣಿಗ ಹುಳುವಾಡಿ, ಸೀತರಾಮ ಗಾಣಿಗ, ಗೋವಿಂದ ಗಾಣಿಗ, ಅರುಣ ಗಾಣಿಗ ಹಾಲಂಬೇರು, ಶ್ರೀಧರ ಗಾಣಿಗ ಉಪ್ಪುಂದ, ಸುಬ್ಬಣ್ಣ ಗಾಣಿಗ ಬಂಕೇಶ್ವರ, ಗಣೇಶ್ ಟೈಲರ್, ಸ್ವಾತಿ. ಯೋಗೀಶ್, ಶ್ರೀಮತಿ ವಸಂತಿ, ನಾಗೇಶ್, ಬಾಬು ಗಾಣಿಗ, ಪ್ರಶಾಂತ್ ಗಾಣಿಗ ಮುಂತಾದವರು ಉಪಸ್ಥಿತರಿದ್ದರು.
ಗಾಣಿಗ ಪ್ರತಿಷ್ಠಾನ ರಿ. ಬೈಂದೂರಿನ ಇದರ ಸಂಚಾಲಕರಾದ ಶಿವಾನಂದ ಗಾಣಿಗ ಸ್ವಾಗತಿಸಿ, ಶ್ರೀಮತಿ ಪ್ರೇಮಾ ವಿ. ಶ್ರೀಮತಿ ನಾಗರತ್ನ, ಮೂಕಾಂಬು ಹುಳುವಾಡಿ ಕಾರ್ಯಕ್ರಮ ಸಂಯೋಜಿಸಿದರು. ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಕಾರ್ಯಕ್ರಮ ನೀರೂಪಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here