ಕರಾಟೆ ಚಾಂಪಿಯನ್ ಷಿಪ್ ನಲ್ಲಿ ಜನತಾ ವಿದ್ಯಾರ್ಥಿಗಳ ಕಮಾಲ್

0
9

Click Here

Click Here

ಕುಂದಾಪುರ ಮಿರರ್ ಸುದ್ದಿ….

Click Here

ಕಿರಿಮಂಜೇಶ್ವರ :ಉಡುಪಿ ಕಟಪಾಡಿಯ ಕುರ್ಕಲು ಎಂಬಲ್ಲಿ ನಡೆದ ಕಾಂಪೀಟ್ 5.0 ಗರ್ಜನೆ ಕರಾಟೆ ಚಾಂಪಿಯನ್ ಷಿಪ್ ನಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆ, ಕಿರಿಮಂಜೇಶ್ವರದ ವಿದ್ಯಾರ್ಥಿಗಳಾದ ನಿಹಾಲ್, ಭುವನ್ ಶೇಟ್, ಶಿಫಾಲಿ, ಚಿರಾಗ್ ಅಮೋಘ ಪ್ರದರ್ಶನದೊಂದಿಗೆ ಪ್ರಥಮ ಸ್ಥಾನ ಗಳಿಸಿದರು. ಲವ್ವಿಕ್, ವಿಶ್ರುತ್, ಆಯುಷ್ ಮೊಗವೀರ, ದೀಕ್ಷಿತ್,ಸೂರ್ಯ, ಇಶಾನ್, ವಿಸ್ಮಯ, ರಿತ್ವಿಕ್, ಅಕ್ಷಜ್ಞ ಮತ್ತು ನಿಮಯ್ ಪುತ್ರನ್ ದ್ವಿತೀಯ ಸ್ಥಾನ ಪಡೆದರು. ಆರುಷಿ, ತನುಷ್, ನಮಿಷ್, ಹವಿಷ್, ಕೌಶಿಕ್, ಅಭಿನವ್, ಅಥರ್ವ ಮತ್ತು ನಾಸಿರ್ ತೃತೀಯ ಸ್ಥಾನ ಪಡೆದರು.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮುಖ್ಯ ಶಿಕ್ಷಕಿ ಹರ್ಷ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Click Here

LEAVE A REPLY

Please enter your comment!
Please enter your name here