ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಈಜು ಸ್ಪರ್ಧೆ

0
10

Click Here

Click Here

ವರುಣತೀರ್ಥ ಕೆರೆ ಗ್ರಾಮದ ಸೌಂದರ್ಯದ ಮೆರಗು ಹೆಚ್ಚಿಸಿದೆ -ಸಂಸದ ಕೋಟ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಗ್ರಾಮದಲ್ಲಿ ದೇಗುಲ ಹೇಗೆ ಇರುತ್ತದೆಯೋ ಅದೇ ರೀತಿ ಆ ಊರಿನ ಕೆರೆ ಕೂಡಾ ಅಷ್ಟೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ದಿಸೆಯಲ್ಲಿ ಕೋಟದ ವರುಣತೀರ್ಥ ಕೆರೆ ಊರಿನ ಸೌಂದರ್ಯದ ಮೆರಗನ್ನು ಹೆಚ್ಚಿಸಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಸೋಮವಾರ ಕೋಟದ ವರುಣತೀರ್ಥಕೆರೆಯಲ್ಲಿ ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 51ನೇ ವರ್ಷದ ಉತ್ಸವದಲ್ಲಿ ಹಮ್ಮಿಕೊಂಡ ಈಜು ಸ್ಪರ್ಧೆಯಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿ ಕೃಷಿಗೆ ಪೂರಕವಾದ ಈ ಕೆರೆ ಸಮಾಜದ ಸದ್ಭಳಕೆಯ ಕೇಂದ್ರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಕೋಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ವೇ.ಮೂ.ಸುಬ್ರಹ್ಮಣ್ಯ ಅಡಿಗ ಶುಭಹಾರೈಸಿದರು.
ಸಮಿತಿಯ ಅಧ್ಯಕ್ಷ ಆನಂದ್ ದೇವಾಡಿಗ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಚಂದ್ರ ಪೂಜಾರಿ, ಕಾರ್ಯಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಉದ್ಯಮಿಗಳಾದ ಸದಾನಂದ ಪೂಜಾರಿ, ಪ್ರವೀಣ್ ಶೆಟ್ಟಿ ಬೇಳೂರು, ರಾಷ್ಟ್ರೀಯ ಈಜುಪಟು ಶ್ರೀಧರ ಉಳಿಂತಾಯ ಸೇರಿದಂತೆ ಅನೇಕ ಗಣ್ಯರು, ಈಜು ಸ್ಪರ್ಧಿಗಳು ,ಸ್ಥಳೀಯರು, ಸಮಿತಿಯ ಪದಾಧಿಕಾರಿಗಳು ಭಾಗಿಯಾದರು.

Click Here

ಜಾಕೇಟ್ ಹಸ್ತಾಂತರ
ಈಜು ಪಟುಗಳಿಗೆ ಅನುಕೂಲಕರವಾದ ವಾಟರ್ ಜಾಕೇಟ್ ಅನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಈಜುಪಟುಗಳಿಗೆ ಹಸ್ತಾಂತರಿಸಿದರು.

Click Here

LEAVE A REPLY

Please enter your comment!
Please enter your name here