ದಿ.ಲಕ್ಷ್ಮೀಕಾಂತ ಪೂಜಾರಿ ಇವರ ಸವಿನೆನಪಿಗಾಗಿ ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ಕುಡಿಯುವ ನೀರಿನ ಯಂತ್ರ ಕೊಡುಗೆ ನೀಡಿದ ಶ್ರೀ ಗುರು ಜ್ಯೋತಿ ಜ್ಯೂಸ್ ಸೆಂಟರಿನ ಮಾಲೀಕರಾದ ನರಸಿಂಹ ಪೂಜಾರಿ ದಂಪತಿ

0
15

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ದಿ.ಲಕ್ಷ್ಮೀಕಾಂತ ಪೂಜಾರಿ ಇವರ ಸವಿನೆನಪಿಗಾಗಿ ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ಕುಡಿಯುವ ನೀರಿನ ಯಂತ್ರವನ್ನು ಶ್ರೀ ಗುರು ಜ್ಯೋತಿ ಜ್ಯೂಸ್ ಸೆಂಟರಿನ ಮಾಲೀಕರಾದ ನರಸಿಂಹ ಪೂಜಾರಿ ದಂಪತಿ ಕೊಡುಗೆ ನೀಡಿದರು. ಉದ್ಘಾಟನೆಯನ್ನು ಕುಂದಾಪುರದ ಠಾಣಾಧಿಕಾರಿ ನಂಜ ನಾಯ್ಕ ಎಸ್. ಇವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕುಂದೇಶ್ಬರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ವಿಜಯ ಎಸ್ ಪೂಜಾರಿ, ರಾಜೇಶ್ ಕಡ್ಗಿ, ಪ್ರಕಾಶ್ ಖಾರ್ವಿ ಅಧ್ಯಕ್ಷರು ಶ್ರೀ ಮಹಾಂಕಾಳಿ ದೇವಸ್ಥಾನ ಖಾರ್ವಿಕೇರಿ, ಬಿಲ್ಲವ ಸಮಾಜದ ಮುಖಂಡ ದಿವಾಕರ ಪೂಜಾರಿ ಕಡ್ಗಿಮನೆ ಹಾಗೂ ವ್ಯವಸ್ಥಾಪನ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ನರಸಿಂಹ ಪೂಜಾರಿಯವರ ಕುಟುಂಬ ವರ್ಗ ಮತ್ತು ಅವರ ಸ್ನೇಹಿತರು, ಹಿತೈಷಿಗಳು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.
ರತ್ನಾಕರ ಶೆರುಗಾರ್ ಹೊನ್ನನಕೇರಿ ಇವರು‌ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here