ಕಂಬದಕೋಣೆ: ರಸ್ತೆ ಅಪಘಾತ – ಇಬ್ಬರು ವಿದ್ಯಾರ್ಥಿಗಳು ಮೃತ್ಯು

0
1472

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಂಬದಕೋಣೆ ಸಮೀಪದ ಸೇತುವೆ ಬಳಿ ಭಾನುವಾರ ಸಂಭವಿಸಿದೆ.

ಮೃತರನ್ನು ಆಂಧ್ರ ಪ್ರದೇಶ ಮೂಲದ ಆದಿತ್ಯ ರೆಡ್ಡಿ (18), ಹಾಗೂ ತರುಣ್‌ ಕುಮಾರ್ ರೆಡ್ಡಿ (19) ಎಂದು ಗುರುತಿಸಲಾಗಿದೆ. ಇಬ್ಬರು ಉಡುಪಿ ಜಿಲ್ಲೆಯ ಕಾಲೇಜೊವೊಂದರ ವಿದ್ಯಾರ್ಥಿಗಳಾಗಿದ್ದು, ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Click Here

ಘಟನೆ ಸುದ್ದಿ ತಿಳಿದ ತತ್ ಕ್ಷಣ ಗಂಗೊಳ್ಳಿಯ 24×7 ಆಪತ್ಭಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ನೆರವಾದರು.‌ ಇವರಿಗೆ ಪ್ರದೀಪ್ ಖಾರ್ವಿ ಉಪ್ಪುಂದ, ಚಾಲಕ ಕೃಷ್ಣ, ನದೀಂ ಸಹಕರಿಸಿದರು.

ಬೈಂದೂರು ‌ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click Here

LEAVE A REPLY

Please enter your comment!
Please enter your name here