ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆಗೆ ವೇದಿಕೆಯಾದ ‘ರಾಕೆಟ್ಸ್ ಆನ್ ದಿ ರನ್‌ವೇ’

0
5

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಮಕ್ಕಳ ಪ್ರತಿಭೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಲಿಟಲ್ ರಾಕೆಟ್ಸ್ ವತಿಯಿಂದ ‘ರಾಕೆಟ್ಸ್ ಆನ್ ದಿ ರನ್‌ವೇ’ ಎಂಬ ವಿಶಿಷ್ಟ ಮಕ್ಕಳ ಫ್ಯಾಷನ್ ಶೋ ಕಾರ್ಯಕ್ರಮ ಇತ್ತೀಚಿಗೆ ಉಡುಪಿಯ ಒಸಿಯನ್ ಪಲ್೯ ನಲ್ಲಿ ಆಯೋಜಿಸಲಾಯಿತು.
ಮೂರು ತಾಯಂದಿರಾದ ಬಬಿತಾ ಮಸ್ಕರೇನ್ಹಸ್, ವೈಷ್ಣವಿ ರಕ್ಷಿತ್ ಕುಂದರ್ ಹಾಗೂ ಡಾ. ಮೇಘಾ ಅಶ್ವತ್ ಶೆಟ್ಟಿ ಅವರ ಕನಸಿನ ಕೂಸಾಗಿ ರೂಪುಗೊಂಡಿರುವ ‘ಲಿಟಲ್ ರಾಕೆಟ್ಸ್’ ಮಕ್ಕಳ ಉಡುಪು ಬ್ರ್ಯಾಂಡ್, ಪ್ರತಿಯೊಂದು ಮಗುವಿಗೂ ಆರಾಮದಾಯಕ, ಆಕರ್ಷಕ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉಡುಪುಗಳ ಹೊಂದಿರುವ ಮಳಿಗೆ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮದಲ್ಲಿ ಪುಟಾಣಿಗಳು ವಿವಿಧ ಆಕರ್ಷಕ ಉಡುಪುಗಳನ್ನು ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ತಮ್ಮ ಪ್ರತಿಭೆ, ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿದರು.
ಮಳಿಗೆಯನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಟ್ರಸ್ಟಿ ಗೀತಾ ಎ ಕುಂದರ್ ಮಾತನಾಡಿ ಕೇವಲ ಗೆಲುವು ಅಥವಾ ಸ್ಪರ್ಧೆಗೆ ಸೀಮಿತವಾಗದೆ, ಮಕ್ಕಳು ಧೈರ್ಯದಿಂದ ವೇದಿಕೆ ಏರುವುದು, ಸಂತೋಷದಿಂದ ತಮ್ಮನ್ನು ತಾವು ಅಭಿವ್ಯಕ್ತಪಡಿಸುವುದು ಹಾಗೂ ಪ್ರತಿಯೊಬ್ಬ ಮಗುವಿನಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಮುಖ್ಯ ಆಶಯವಾಗಲಿ ಪ್ರಸ್ತುತ ಯುಗದಲ್ಲಿ ಲಿಟಲ್ ರಾಕೆಟ್ಸ್’ ಮಕ್ಕಳ ಉಡುಪು ಬ್ರ್ಯಾಂಡ್ ಹೊಸ ಆಯಾಮ ನೀಡಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ತೀರ್ಪುಗಾರರಾಗಿ ವ್ಯೋಮ್ ಡ್ಯಾನ್ಸ್ ಅಕಾಡೆಮಿಯ ಅವಿನಾಶ್, ಮಾಡೆಲ್ ಹಾಗೂ ಇನ್‌ಫ್ಲುಯೆನ್ಸರ್ ಭೂಮಿಕಾ, ಶಿಕ್ಷಕಿ ಹಾಗೂ ಇನ್‌ಫ್ಲುಯೆನ್ಸರ್ ಸಂಧ್ಯಾ ಕಾಮತ್ ಮತ್ತು ಮೇಕಪ್ ಆರ್ಟಿಸ್ಟ್ ಹಾಗೂ ಇನ್‌ಫ್ಲುಯೆನ್ಸರ್ ಶ್ರುತಿ ಸುದೀಪ್ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜೆನಿಶಾ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here