ಪಚ್ಚಿಲೆ, ಪಂಜರ, ಕಲ್ಲ, ಮುತ್ತು ಕೃಷಿಯ ನಂತರ ಇದೀಗ ಕಡಲ ಪಾಚಿ ಕೃಷಿ- ಮೀನುಗಾರರಿಗೆ ಹೊಸ ಆದಾಯದ ದಾರಿ -ಮನೋಜ್

0
8

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ, ಸೆಲ್ಕೋ ಫೌಂಡೇಶನ್ ಹಾಗೂ ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಇವರ ಆಶ್ರಯದಲ್ಲಿ ಕೋಡಿ ಕನ್ಯಾಣ ಹೊಸ ಸೇತುವೆ ಬಳಿ ಸೀ-ವೀಡ್, ಪಂಜರ ಹಾಗೂ ಪಚ್ಚಿಲೆ ಕೃಷಿಗಳ ಮಾಹಿತಿ ಕಾರ್ಯಾಗಾರ ಬುಧವಾರ ಜರಗಿತು.
ಕಾರ್ಯಕ್ರಮವನ್ನು ಎಂಪಿಇಡಿಎ ಉಪನಿರ್ದೇಶಕರಾದ ಮನೋಜ್ ಮತ್ತು ಕೆ‌.ವಿ.ಕೆ ಬ್ರಹ್ಮಾವರ ಮುಖ್ಯಸ್ಥರಾದ ಭೂಮಿಕಾ ಅವರು ಪಚ್ಚಿಲೆ ಮರಿಯನ್ನು ರೋಪ್ ಗೆ ಹಾಕಿ, ಬಟ್ಟೆಯಿಂದ ಸ್ಟಿಚ್ ಮಾಡಿ ರೋಪ್ ಸಿದ್ಧಗೊಳಿಸುವ ಮೂಲಕ ಉದ್ಘಾಟಿಸಿದರು.
ಮನೋಜ್ ಅವರು ಮಾತನಾಡಿ ಉಡುಪಿ ಕಿನಾರದ ಮೀನುಗಾರರು ಈಗಾಗಲೇ ಪಚ್ಚಿಲೆ, ಪಂಜರ, ಕಲ್ಲ, ಮುತ್ತು ಕೃಷಿ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಕಳೆದ ವರ್ಷ ನಡೆದ ಮೀನುಗಾರರ ಸಂವಾದ ಕಾರ್ಯಕ್ರಮದಲ್ಲಿ ಸೀ-ವೀಡ್ ಬಗ್ಗೆ ಮಾಹಿತಿ ನೀಡಿದ್ದೆವು. ಅದನ್ನು ಮೀನುಗಾರರು ಅಧ್ಯಯನ ಮಾಡಿ, ಮಾರುಕಟ್ಟೆ ಲಿಂಕೇಜ್ ಪಡೆದು, ಇದೀಗ ಸೀ-ವೀಡ್ ಕೃಷಿ ಆರಂಭಿಸಿರುವುದು ನಿಜಕ್ಕೂ ಮಾದರಿ ಕಾರ್ಯ
ಕಾರವಾರದ ಸಿಎಂಎಫ್ ಆರ್ ಐ ಇಲ್ಲಿನ ವಿಜ್ಞಾನಿ ಸೋನಾಲಿ ಮಾತನಾಡಿ ಸೀ-ವೀಡ್ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಸೀ-ವೀಡ್ ನಿಂದ ತಯಾರಿಸಬಹುದಾದ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ತಿಳಿಸಿದರು. ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಸಹಕಾರ ಇದೆ ಎಂದು ಹೇಳಿದರು.
ಕಾರವಾರ ಮೀನುಗಾರಿಕೆ ಪ್ರೊಫೆಸರ್ ಶಿವಕುಮಾರ್ ಹಾರಂಗಿ ಉಡುಪಿಕಿನಾರ ಎಫ್ ಪಿ ಒ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸೆಲ್ಕೋ ಫೌಂಡೇಶನ್ ಟೆಕ್ನಿಕಲ್ ಹೆಡ್ ಕೃಷ್ಣಮೂರ್ತಿ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ನೀರಿನ ತಾಪ ಹೆಚ್ಚಾಗುತ್ತಿದೆ. ಅದನ್ನು ಕಡಿಮೆ ಮಾಡಲು ಸೋಲಾರ್ ಏರಿಯೇಷನ್ ಬಳಸಿದರೆ ತಾಪ ಕಡಿಮೆ ಮಾಡಿ ಉತ್ತಮ ಇಳುವರಿ ಪಡೆಯಬಹುದು. ಇದರಿಂದ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ ಎಂದು ಮಾಹಿತಿ ನೀಡಿ ಮೀನುಗಾರರಿಗೆ ವಿಶೇಷ ಯೋಜನೆಯೊಂದಿಗೆ ಸೆಲ್ಕೋ ಫೌಂಡೇಶನ್ ಮೂಲಕ ಪ್ರತಿ ಘಟಕಕ್ಕೆ 80% ಅನುದಾನ ನೀಡಿ ಮೀನುಗಾರರಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಈ ಅನುದಾನದಿಂದ ಮೀನುಗಾರರು ಕಡಿಮೆ ಖರ್ಚಿನಲ್ಲಿ ಸೋಲಾರ್ ಏರಿಯೇಷನ್ ಘಟಕ ಅಳವಡಿಸಿಕೊಂಡು, ಮೀನು ಸಾಕಾಣಿಕೆಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಐಸಿಎಆರ್ ಗೋವಾ ಮೀನುಗಾರಿಕೆ ವಿಜ್ಞಾನಿಗಳಾದ ತ್ರಿವೇಶ್ , ಶ್ರೀಕಾಂತ್ , ತೋಳಾರ್ ಓಷಿಯನ್ ಪ್ರಾಡಕ್ಟ್ ಪ್ರಭಂಧಕ ಯೋಗೀಶ್, ಮನೋಜ್, ಎಂಪಿಇಡಿಎ ಉಪನಿರ್ದೇಶಕ ಸುಬ್ರಮಣ್ಯ, ಕೆ.ವಿ.ಕೆ ಬ್ರಹ್ಮಾವರ ಇದರ ವಿಜ್ಞಾನಿಗಳಾದ ಸದಾನಂದ ಆಚಾರ್ಯ, ಶ್ರೀಕಾಂತ್,ಕುಮಟಾ ಮೀನುಗಾರಿಕೆ ಸಹಾಯಕ ನಿರ್ದೇಶಕ ಚೇತನ್,ಹೊನ್ನಾವರ ವಿಭಾಗ್ ಸಹಾಯಕ ನಿರ್ದೇಶಕ ಸಚಿನ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷೆ ಬೇಬಿ ಮೆಂಡನ್, ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಗುಲಾಬಿ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದಿನ ಕೋಡಿ ಉಪಸ್ಥಿತರಿದ್ದರು.

Click Here

ಕಾರ್ಯಕ್ರಮವನ್ನು ಸ್ಕೋಡ್ವೆಸ್ ಇದರ ಗಂಗಾಧರ್ ನಾಯಕ್ ನಿರೂಪಿಸಿದರು. ಸಿಬ್ಬಂದಿ ಮೋನಿಷಾ ವಂದಿಸಿದರು.

Click Here

LEAVE A REPLY

Please enter your comment!
Please enter your name here