ಕೋಡಿ – ಬ್ಯಾರೀಸ್ ವಿದ್ಯಾ ಸಂಸ್ಥೆಗಳ “ಸ್ವಚ್ಛ ಕಡಲತೀರ – ಹಸಿರು ಕೋಡಿ” ಅಭಿಯಾನ

0
357

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: “ಶ್ರದ್ದಾ ಭಕ್ತಿಯಿಂದ ಮಾಡುವ ಕಾಯಕಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ” ಎಂಬ ನಂಬಿಕೆಗೆ ಸಾಕ್ಷಿಯಾಗಿ ಬ್ಯಾರೀಸ್ ವಿದ್ಯಾ ಸಂಸ್ಥೆಗಳು ನಡೆಸುತ್ತಿರುವ “”ಸ್ವಚ್ಛ ಕಡಲತೀರ – ಹಸಿರು ಕೋಡಿ” ಅಭಿಯಾನದ 11 ನೇ ಹಂತ ಯಶಸ್ವಿಯಾಗಿ ನೆರವೇರಿತು.

Click Here

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು , ಬೋಧಕ , ಬೋಧಕೇತರ ವರ್ಗದವರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿ ಪೋಷಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಪರಿಸರ ಪ್ರಿಯರು ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೋಡಿಯ ಡೆಲ್ಟಾ ಪಾಯಿಂಟ್ ನಿಂದ ಹಳೆಅಳಿವೆ ಕಿನಾರ ತುದಿಯ ವರೆಗಿನ ಸಮುದ್ರ ಕಿನಾರೆಯನ್ನು ಸ್ವಚ್ಛಗೊಳಿಸಿದರು.” ಪರಿಸರ ಸಂರಕ್ಷಣೆ ” ಎಂಬ ದೇವತಾ ಕಾಯಕದಲ್ಲಿ ಸಹಕರಿಸುತ್ತಿರುವ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ವಂದಿಸಿದರು.

Click Here

LEAVE A REPLY

Please enter your comment!
Please enter your name here